ನೊಣವಿನಕೆರೆಯಲ್ಲೂ ಬಿತ್ತೊಂದು ಚಿರತೆ ಬೋನಿಗೆ, ಜನರ ಕಾಟ ಕಂಡು ಅದು ಅಂದುಕೊಂಡಿದ್ದು ಯಾಕಾದ್ರೂ ಬಂದೆನೋ ಊರಿಗೆ!
ಚಿರತೆಯಾಗಲೀ ಅಥವಾ ಹುಲಿಯಾಗಲೀ ಸೆರೆ ಸಿಕ್ಕಾಗ ಅದು ಗಾಬರಿಗೊಂಡಿರುತ್ತದೆ ಮತ್ತು ಆತಂಕದಲ್ಲಿರುತ್ತದೆ. ಸೆರೆ ಸಿಕ್ಕ ಪ್ರಾಣಿಯನ್ನು ಅದರ ಪಾಡಿಗೆ ಬಿಟ್ಟುಬಿಡಬೇಕು.
ನಾವು ಬುಧವಾರವಷ್ಟೇ ಹಾಸನದ ಬೇಲೂರು ತಾಲ್ಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಜನರಿಗೆ ಕಂಟಕವಾಗಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಅರವಳಿಕೆ ಮದ್ದು ಪ್ರಯೋಗಿಸಿ ಸೆರೆ ಹಿಡಿದು ಬೋನಲ್ಲಿ ಹಾಕಿದ ವಿಡಿಯೋವನ್ನು ತೋರಿಸಿದೆವು. ಈ ಚಿರತೆ ಕಳೆದ ಒಂದು ವರ್ಷದಿಂದ ಊರೊಳಗೆ ಬಂದು ಸಾಕುಪ್ರಾಣಿಗಳನ್ನು ಎತ್ತಿಕೊಂಡು ಒಯ್ಯುತ್ತಿತ್ತಂತೆ. ಓಕೆ, ಕಳೆದ ರಾತ್ರಿ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯಲ್ಲಿರುವ ಕಸುವಿನಹಳ್ಳಿಯಲ್ಲೂ ಚಿರತೆಯೊಂದನ್ನು ಸೆರೆಹಿಡಿಯಲಾಗಿದೆ. ಅಸಲಿಗೆ ಅದನ್ನು ಬೋನಿಟ್ಟು ಟ್ರ್ಯಾಪ್ ಮಾಡಲಾಗಿದೆ. ಈ ಚಿರತೆಯೂ ಗ್ರಾಮಸ್ಥರನ್ನು ಬಹಳ ದಿನಗಳಿಂದ ಕಾಡುತಿತ್ತು.
ಚಿರತೆಯಾಗಲೀ ಅಥವಾ ಹುಲಿಯಾಗಲೀ ಸೆರೆ ಸಿಕ್ಕಾಗ ಅದು ಗಾಬರಿಗೊಂಡಿರುತ್ತದೆ ಮತ್ತು ಆತಂಕದಲ್ಲಿರುತ್ತದೆ. ಸೆರೆ ಸಿಕ್ಕ ಪ್ರಾಣಿಯನ್ನು ಅದರ ಪಾಡಿಗೆ ಬಿಟ್ಟುಬಿಡಬೇಕು. ಅದನ್ನು ಯಾವುದಾದರೂ ಮೃಗಾಲಯಕ್ಕೆ ಒಯ್ಯುವುದು ಇಲ್ಲವೇ ಮತ್ತೊಂದು ಅರಣ್ಯ ಪ್ರದೇಶಕ್ಕೆ ಒಯ್ದು ಬಿಡುವುದೇ ಅಂತ ಅರಣ್ಯ ಇಲಾಖೆಯವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಅವರ ಸುಪರ್ದಿಗೆ ಮತ್ತು ವಿವೇಚನೆಗೆ ಬಿಟ್ಟ ವಿಷಯ.
ಅದರೆ, ಕಸುವಿನಹಳ್ಳಿ ಜನ ನೋಡಿ ಏನು ಮಾಡುತ್ತಿದ್ದಾರೆ. ಅದಾಗಲೇ ತೀರ ಆತಂಕದಲ್ಲಿರುವ ಚಿರತೆಯನ್ನು ಕೂಗಾಡಿ, ಗಲಾಟೆ ಎಬ್ಬಿಸುತ್ತಾ ಅದಕ್ಕೆ ಇನ್ನಷ್ಟು ಗಾಬರಿಯಾಗುವಂತೆ ಮಾಡುತ್ತಿದ್ದಾರೆ. ಕೆಲವರಂತೂ ಬೋನಿನ ಹತ್ತಿರ ಹೋಗಿ ಅದನ್ನು ಕೆಣಕುವ ಮತ್ತು ತಿವಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕೂಡದು ಮತ್ತು ಸಲ್ಲದು.
ಇದನ್ನೂ ಓದಿ: ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ