ಯೂರೋಪ್ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ಬೆಂಗಳೂರಿಗೆ ವಾಪಸ್?

ಯೂರೋಪ್ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ಬೆಂಗಳೂರಿಗೆ ವಾಪಸ್?

ಸಾಧು ಶ್ರೀನಾಥ್​
|

Updated on: Aug 03, 2023 | 7:24 PM

ದಳಪತಿ, ಮಾಜಿ ಸಿಎಂ ಕುಮಾರಸ್ವಾಮಿ ಫ್ಯಾಮಿಲಿ ಜೊತೆ ವಿದೇಶದಲ್ಲಿ ಫುಲ್ ರೌಂಡ್ಸ್ ಹಾಕಿದ್ದಾರೆ.. ಪತ್ನಿ, ಮಗ, ಮೊಮ್ಮಗನ ಜೊತೆ ಐಲ್ಯಾಂಡ್​ನಲ್ಲಿ ಕಾಲ ಕಳೀತಿದ್ದು, ಕುಟುಂಬಸ್ಥರ ಖುಷಿ ಕ್ಷಣಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

JDS ದಳಪತಿ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (Former Chief Minister HD Kumaraswamy) ತಮ್ಮ ಫ್ಯಾಮಿಲಿ (Family) ಜೊತೆ ವಿದೇಶದಲ್ಲಿ ಫುಲ್ ರೌಂಡ್ಸ್ (European tour) ಹಾಕಿದ್ದಾರೆ. ಪತ್ನಿ, ಮಗ, ಮೊಮ್ಮಗನ ಜೊತೆ ಐಲ್ಯಾಂಡ್​ನಲ್ಲಿ ಕಾಲ ಕಳೆಯುತ್ತಿದ್ದು, ಕುಟುಂಬಸ್ಥರ ಖುಷಿ ಕ್ಷಣಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸಿಂಗಾಪುರದಲ್ಲಿ ಕುಮಾರಸ್ವಾಮಿ ಜೋಡೆತ್ತಿನ ಸರ್ಕಾರ ಕೆಡವಲು ತಂತ್ರ ಮಾಡ್ತಿದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದ್ರೆ ಇದಕ್ಕೆ ತಿರುಗೇಟು ನೀಡಿದ ದಳಪತಿ, ತಾವು ಯುರೋಪ್ ಪ್ರವಾಸದಲ್ಲಿ ಇರೋ ಫೋಟೋಗಳನ್ನ ಹಂಚಿಕೊಂಡಿದ್ರು. ಇದೀಗ ಪತ್ನಿ ಅನಿತಾಕುಮಾರಸ್ವಾಮಿ, ಮೊಮ್ಮಗ, ಸೊಸೆ, ಮಗನ ಜೊತೆಗಿನ ಒಂದೊಂದೇ ವಿಡಿಯೋ, ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಡೀ ಕುಟುಂಬ ಜುಲೈ 23ರಂದು ಯೂರೋಪ್ ಫ್ಲೈಟ್ ಹತ್ತಿತ್ತು. 2 ವಾರ ಯೂರೋಪಿನ ವಿವಿಧ ನಗರ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ರೌಂಡ್ಸ್ ಹಾಕಿದೆ. ಪ್ರವಾಸ ಮುಗಿಸಿ ನಾಳೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ. ದಳಪತಿ ವಾಪಸ್ ಆಗ್ತಿದ್ದಂತೆ ಜೆಡಿಎಸ್ ಪಕ್ಷ ಸಂಘಟನೆ, ಮುಂಬರುವ ಬಿಬಿಎಂಪಿ, ಜಿಲ್ಲಾ, ತಾಲೂಕು ಹಾಗೂ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ