ಬೆಂಗಳೂರು: ತಿರುಮಲಗಿರಿ ಶ್ರೀಲಕ್ಷ್ಮೀ ವೆಂಟೇಶ್ವರ ದೇವಸ್ಥಾನದಲ್ಲಿ ಹೆಚ್ಡಿ ಕುಮಾರಸ್ವಾಮಿ ಪೂಜೆ
ನಮ್ಮ ಕುಟುಂಬದಲ್ಲಿನ ಇತ್ತೀಚಿನ ಬೆಳವಣಿಗೆ, ಆರೋಗ್ಯ ವೃದ್ಧಿಗೆ ಪೂಜೆ ಮಾಡಿಸಿದ್ದೇನೆ. ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು, ಸೆ.09: ಕೆಲದಿನಗಳ ಹಿಂದೆ ಸ್ಟ್ರೋಕ್ ಹೊಡೆದು ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಗುಣಮುಖರಾಗಿ ಬಂದಿದ್ದಾರೆ. ಇದೀಗ ಜೆ.ಪಿ.ನಗರದ ತಿರುಮಲಗಿರಿ ಶ್ರೀಲಕ್ಷ್ಮೀ ವೆಂಟೇಶ್ವರ (Lakshmi Venkateshwara Temple) ದೇವಸ್ಥಾನದಲ್ಲಿ ಮುಂಜಾನೆ ಐದು ಗಂಟೆಗೆ ಹೋಮ, ಹವನ ನೆರವೇರಿಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಂದೆಯವರ ಆರೋಗ್ಯ ವೃದ್ಧಿಗಾಗಿ ಪೂಜೆ ಸಲ್ಲಿಸಿದ್ದೇನೆ. ನಮ್ಮ ಕುಟುಂಬದಲ್ಲಿನ ಇತ್ತೀಚಿನ ಬೆಳವಣಿಗೆ, ಆರೋಗ್ಯ ವೃದ್ಧಿಗೆ ಪೂಜೆ ಮಾಡಿಸಿದ್ದೇನೆ. ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದೇನೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಸದ್ಯಕ್ಕೆ ಮಾತಾಡಲ್ಲ. ಮುಂದಿನ ದಿನಗಳಲ್ಲಿ ಮೈತ್ರಿ ವಿಚಾರವಾಗಿ ಮಾತನಾಡುತ್ತೇನೆ. ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ ಎಂದರು.