ನಡು ರಾತ್ರಿ ನೀರು ಕುಡಿಯಲು ಬಂದು ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಜಿಂಕೆ ಮರಿಯ ರಕ್ಷಣೆ

ನಡು ರಾತ್ರಿ ನೀರು ಕುಡಿಯಲು ಬಂದು ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಜಿಂಕೆ ಮರಿಯ ರಕ್ಷಣೆ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on:Sep 09, 2023 | 10:25 AM

Deer Rescue: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದಲ್ಲಿ ಕೆರೆಯ ಮಧ್ಯೆ ಸಿಲುಕಿ ಜಿಂಕೆ ನರಳಾಡುತ್ತಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ‌ ಸಹಾಯದಿಂದ ‌ ರಕ್ಷಣೆ ಮಾಡಿದ್ದಾರೆ.

ಚಿಕ್ಕಮಗಳೂರು, ಸೆಪ್ಟೆಂಬರ್​ 9 : ನಡು ರಾತ್ರಿ ನೀರು ಕುಡಿಯಲು (drinking water) ಬಂದು ಕೆರೆಯಲ್ಲಿ ಸಿಲುಕಿದ್ದ ಜಿಂಕೆ ಮರಿಯನ್ನು (Fawn, Deer) ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ (mudigere taluk in chikkamagalur) ಹೆಗ್ಗುಡ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೆರೆಯ ಮಧ್ಯೆ ಸಿಲುಕಿ ಜಿಂಕೆ ನರಳಾಡುತ್ತಿತ್ತು. ರಾತ್ರಿ ವೇಳೆ ಕೆರೆಯಲ್ಲಿ ನೀರು ಕುಡಿಯಲು ಬಂದು ಸಿಕ್ಕಿಹಾಕಿಕೊಂಡು ಜಿಂಕೆ ಪರಿತಪಿಸುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ‌ ಸಹಾಯದಿಂದ ಜಿಂಕೆಯನ್ನು‌ ರಕ್ಷಣೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 09, 2023 09:31 AM