ಮೇಕೆದಾಟು ಯೋಜನೆ ಕುರಿತು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅರ್ಥಗರ್ಭಿತ ಮಾತು
ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆಗಾಗಿ 4.5 ಟಿ ಎಮ್ ಸಿ ನೀರನ್ನು ಬಳಸಿಕೊಳ್ಳಬಹುದು ಅಂತ 2018ರಲ್ಲಿ ತೀರ್ಪು ನೀಡಿದ ಟಾಪ್ ಕೋರ್ಟ್ ಹೇಳಿದೆ. ಹಾಗಾಗಿ ನಾವು ತಮಿಳುನಾಡು ಸರ್ಕಾರದ ನಿರ್ಣಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಮೇಕೆದಾಟು ಯೋಜನೆಯನ್ನು (Mekedatu Project) ವಿರೋಧಿಸಲು ತಮಿಳುನಾಡು ಸರ್ಕಾರ (Tamil Nadu Government) ಮತ್ತು ಅಲ್ಲಿನ ಪ್ರತಿಪಕ್ಷಗಳು ಮಾಡಿಕೊಂಡಿರುವ ನಿರ್ಣಯದ ಬಗ್ಗೆ ಸದನದಲ್ಲಿ ಅರ್ಥಗರ್ಭಿತವಾಗಿ ಮಾತಾಡಿದರು. 2018ರಲ್ಲೇ ತಮಿಳುನಾಡು ಸರ್ಕಾರದ ಪರ ವಾದ ಮಾಡಿದ ವಕೀಲರು ಮೆಟ್ಟೂರ್ ಬಿಳಿಗೊಂಡ ಬಳಿ ಕರ್ನಾಟಕ ಒಂದು ಬ್ಯಾಲೆನ್ಸಿಂಗ್ ಜಲಾಶಯ ಕಟ್ಟಿಕೊಳ್ಳಲು ತಮ್ಮ ಸರ್ಕಾರದ ಅಭ್ಯಂತರವಿಲ್ಲವೆಂದು ಸುಪ್ರೀಮ್ ಕೋರ್ಟ್ ನಲ್ಲೇ ಹೇಳಿರುವುದರಿಂದ ಸೋಮವಾರ ತಮಿಳುನಾಡು ಸರ್ಕಾರ ಮಾಡಿಕೊಂಡಿರುವ ನಿರ್ಣಯಕ್ಕೆ ಯಾವುದೇ ಬೆಲೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
2007 ಟ್ರಿಬ್ಯೂನಲ್ ತೀರ್ಪಿನ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದಾಗ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆಗಾಗಿ 4.5 ಟಿ ಎಮ್ ಸಿ ನೀರನ್ನು ಬಳಸಿಕೊಳ್ಳಬಹುದು ಅಂತ 2018ರಲ್ಲಿ ತೀರ್ಪು ನೀಡಿದ ಟಾಪ್ ಕೋರ್ಟ್ ಹೇಳಿದೆ. ಹಾಗಾಗಿ ನಾವು ತಮಿಳುನಾಡು ಸರ್ಕಾರದ ನಿರ್ಣಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡ ಅವರು ಎರಡು ಹಂತಗಳಲ್ಲಿ ಜಲಾಶಯ ನಿರ್ಮಿಸಬೇಕೆಂದು ಹೇಳಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಸರ್ ಪ್ಲಸ್ ನೀರು ಪದವನ್ನು ತಾಂತ್ರಿಕವಾಗಿ ಹೆಚ್ಚು ಬಳಸುವಂತಿಲ್ಲ ಎಂಬ ಸಲಹೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
ಬೆಂಗಳೂರಿಗೆ 4.5 ಟಿ ಎಮ್ ಸಿ ನೀರಿನ ಅಗತ್ಯವಿರುವ ಹಿನ್ನೆಲೆಯಲ್ಲಿ 68 ಟಿ ಎಮ್ ಸಾಮರ್ಥ್ಯದ ಜಲಾಶಯ ಯಾಕೆ ಬೇಕು ಅಂತ ತಮಿಳುನಾಡು ಸರ್ಕಾರ ತಕರಾರು ತೆಗೆಯುವ ಸಾಧ್ಯತೆ ಇರುವುದರಿಂದ ಜಲಾಶಯದ ಗೋಡೆಗಳ ಎತ್ತರವನ್ನು ಬಹಳ ಎಚ್ಚರಿಕೆಯಿಂದ ನಿರ್ಧರಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮೇಕೆದಾಟು ಯೋಜನೆಗೆ ನಮಗೆ ಪರಿಸರ ಇಲಾಖೆಯ ಕ್ಲೀಯರನ್ಸ್ ಮಾತ್ರ ಬೇಕಾಗಿದೆ. ಹಾಗಾಗಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರ್ವಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕಾಲಹರಣ ಮಾಡದೆ ಕಾರ್ಯಗತಗೊಳಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನ ಗೌರವ, ಪ್ರತಿಷ್ಠೆ ಹಾಳುಮಾಡುತ್ತಿರುವ ಭ್ರಷ್ಟರು, ಮೊದಲು ಬಿಬಿಎಂಪಿಯನ್ನ ಸ್ವಚ್ಛಗೊಳಿಸಬೇಕಿದೆ -ಕುಮಾರಸ್ವಾಮಿ