ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯಗೆ ಮೇಕೆದಾಟು ಯೋಜನೆ ನೆನಪಾಗಲಿಲ್ಲ, 5 ವರ್ಷ ಅವರೇನು ರಾಗಿ ಬೀಸಿದರೇ? ಸಿಟಿ ರವಿ
ಇವರ ಪಾದಯಾತ್ರೆ ಬರೀ ನಾಟಕ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಮೇಕೆದಾಟು ಯೋಜನೆ ನೆನಪಾಗಲಿಲ್ಲ. ಐದು ವರ್ಷ ಸರ್ಕಾರ ನಡೆಸಿದರಲ್ಲ, ಆಗ ರಾಗಿ ಬೀಸುತ್ತಾ ಕಾಲ ಕಳೆದರಾ ಅಂತ ರವಿ ಪ್ರಶ್ನಿಸಿದರು.
ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಮೇಕೆದಾಟು ಯೋಜನೆ (Mekedatu Project) ಜಾರಿಗೊಳಿಸುವ ವಿಷಯದಲ್ಲಿ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಮಂಗಳವಾರ ವಿಧಾನಸೌಧದ ಮುಂದೆ ಮಾಧ್ಯಮವರೊಂದಿಗೆ ಮಾತಾಡುವಾಗ ರವಿ ಅವರು ಕಾಂಗ್ರೆಸ್ ಪಾದಯಾತ್ರೆ ಮತ್ತು ಸಿದ್ದರಾಮಯ್ಯನವರನ್ನು ಗೇಲಿ ಮಾಡಿದರು. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿದೆ, ಅಲ್ಲಿರುವ ಡಿ ಎಮ್ ಕೆ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಸದಸ್ಯ ಪಕ್ಷವಾಗಿರುವುದರಿಂದ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಎಮ್ ಕೆ ಸ್ಟಾಲಿನ್ ಜೊತೆ ಮಾತಾಡಬೇಕು ಮತ್ತು ಅವರ ಮನವೊಲಿಸಬೇಕು. ಅದನ್ನು ಬಿಟ್ಟು ಅವರು ಇವರು ಪಾದಯಾತ್ರೆ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ರವಿ ಹೇಳಿದರು
ಅಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ, ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಅಂದುಕೊಂಡಿದ್ದಾರೆಯೇ? ಡಿ ಎಮ್ ಕೆಯೊಂದಿಗೆ ಮಾತಾಡಲು ನಮ್ಮಿಂದ ಕೈಯಿಂದಾಗದು ಅವರು ಹೇಳಲಿ, ಮುಂದಿನದು ನಾವು ನೋಡಿಕೊಳ್ಳುತ್ತೇವೆ ಅಂತ ರವಿ ಹೇಳಿದರು.
ಕಾಂಗ್ರೆಸ್ ಗೆ ತಮಿಳುನಾಡಿನಲ್ಲಿ ಡಿ ಎಮ್ ಕೆ ಜೊತೆ ಸೇರಿ ಸರ್ಕಾರ ರಚಿಸುವುದು ಬೇಕು ಅದರೆ ಮೇಕೆದಾಟು ಯೋಜನೆ ಬಗ್ಗೆ ಅಲ್ಲಿ ಪ್ರಸ್ತಾಪ ಮಾಡುವುದು ಮಾತ್ರ ಬೇಕಿಲ್ಲ, ಇವರ ಪಾದಯಾತ್ರೆ ಬರೀ ನಾಟಕ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಮೇಕೆದಾಟು ಯೋಜನೆ ನೆನಪಾಗಲಿಲ್ಲ. ಐದು ವರ್ಷ ಸರ್ಕಾರ ನಡೆಸಿದರಲ್ಲ, ಆಗ ರಾಗಿ ಬೀಸುತ್ತಾ ಕಾಲ ಕಳೆದರಾ ಅಂತ ರವಿ ಪ್ರಶ್ನಿಸಿದರು.
ಅಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ನಾಟಕ ಮತ್ತು ರಾಜಕೀಯ ಮಾಡುತ್ತಿವೆಯೇ ಅಂತ ಮಾಧ್ಯಮದವರು ಕೇಳಿದಾಗ, ಅಸಮಾಧಾನಗೊಂಡ ರವಿ ಅವರು ನಾವ್ಯಾಕೆ ನಾಟಕ ಮಾಡೋಣ, ಯೋಜನೆಗಾಗಿ ಬಜೆಟ್ ನಲ್ಲಿ ಹಣ ತೆಗೆದಿಟ್ಟಿಲ್ಲವೇ ಅಂತ ಹೇಳಿದರು.
ಇದನ್ನೂ ಓದಿ: ಬೆತ್ತಲಾಗಿ ಓಡಾಡ್ತಿದ್ದ ಬೆಂಗಳೂರಿನ ಬುದ್ಧಿಮಾಂದ್ಯ ಮಹಿಳೆಯ ರಕ್ಷಿಸಿ, ನೆರವಿನ ಹಸ್ತ ಚಾಚಿದ ಕೋಲಾರ ಪೊಲೀಸರು