Siddaramaiah in Mysuru: ಅಗಲಿದ ಗೆಳೆಯ ಪ ಮಲ್ಲೇಶ್ ಗೆ ಅಂತಿಮ ನಮನ ಸಲ್ಲಿಸುವಾಗ ಮಾಜಿ ಮುಖ್ಯಮಂತ್ರಿ ಭಾವುಕರಾದರು

Siddaramaiah in Mysuru: ಅಗಲಿದ ಗೆಳೆಯ ಪ ಮಲ್ಲೇಶ್ ಗೆ ಅಂತಿಮ ನಮನ ಸಲ್ಲಿಸುವಾಗ ಮಾಜಿ ಮುಖ್ಯಮಂತ್ರಿ ಭಾವುಕರಾದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 20, 2023 | 2:09 PM

ಅವರು ಅಲ್ಲಿಗೆ ಆಗಮಿಸಿ ಕಾರಿನಿಂದ ಇಳಿಯುವಾಗ ಕೆಲ ಬೆಂಬಲಿಗರು ಜೈ ಹಾಕುವ ಪ್ರಯತ್ನ ಮಾಡುತ್ತಾರೆ. ಸಿದ್ದರಾಮಯ್ಯ ಕೂಡಲೇ ಅವರತ್ತ ನೋಡಿ ಸುಮ್ಮನಿರುವಂತೆ ಸೂಚಿಸುತ್ತಾರೆ.

ಮೈಸೂರು:  ಗುರುವಾರದಂದು ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದ ಮೈಸೂರು (Mysuru) ಕುವೆಂಪು ನಗರದ ನಿವಾಸಿ ಪ ಮಲ್ಲೇಶ್ (Pa Mallesh) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಆಪ್ತ ಮತ್ತು ಬಾಲ್ಯದ ಗೆಳೆಯರಾಗಿದ್ದರು. ಗೆಳೆಯನ ಅಂತಿಮ ದರ್ಶನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಪಾರ್ಥೀವ ಶರೀರದ ಪಕ್ಕ ನಿಂತಾಗ ಭಾವುಕರಾದರು. ಮಲ್ಲೇಶ್ ಕುಟುಂಬದ ಸದಸ್ಯರೊಂದಿಗೆ ಮಾತಾಡಿ ಅವರಿಗೆ ಸಾಂತ್ವನ ಹೇಳಿದ ಬಳಿಕ ಅಲ್ಲಿಂದ ಹೊರಟರು. ಅವರು ಅಲ್ಲಿಗೆ ಆಗಮಿಸಿ ಕಾರಿನಿಂದ ಇಳಿಯುವಾಗ ಕೆಲ ಬೆಂಬಲಿಗರು ಜೈ ಹಾಕುವ ಪ್ರಯತ್ನ ಮಾಡುತ್ತಾರೆ. ಸಿದ್ದರಾಮಯ್ಯ ಕೂಡಲೇ ಅವರತ್ತ ನೋಡಿ ಸುಮ್ಮನಿರುವಂತೆ ಸೂಚಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ