ಕಾಂಗ್ರೆಸ್​ ಸಮಾವೇಶದಲ್ಲಿ ಡಿ.ಕೆ ಶಿವಕುಮಾರ್​ ಪರ ಘೋಷಣೆ: ಗರಂ ಆದ ಸಿದ್ಧರಾಮಯ್ಯ

ಕಾಂಗ್ರೆಸ್​ ಸಮಾವೇಶದಲ್ಲಿ ಡಿ.ಕೆ ಶಿವಕುಮಾರ್​ ಪರ ಘೋಷಣೆ: ಗರಂ ಆದ ಸಿದ್ಧರಾಮಯ್ಯ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 20, 2023 | 1:00 PM

ದಾವಣಗೆರೆ ಕಾಂಗ್ರೆಸ್ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದರೆ, ಇತ್ತ ಸಮಾವೇಶಕ್ಕೆ ಬಂದಿದ್ದ ಜನರು ಡಿಕೆ, ಡಿಕೆ ಎಂದು ಘೋಷಣೆ ಹಾಕಿದರು.

ದಾವಣಗೆರೆ: ನಾನು 4 ದಶಕಗಳಿಗಿಂತ ಹೆಚ್ಚು ಕಾಲ ರಾಜಕೀಯದಲ್ಲಿ ಇದ್ದೇನೆ. ಆದರೆ ಬಿಜೆಪಿಯಂತಹ ಭ್ರಷ್ಟಾಚಾರ ಸರ್ಕಾರ ನಾನು ನೋಡಿಲ್ಲ ಅಂತಾ ದಾವಣಗೆರೆ ಕಾಂಗ್ರೆಸ್ (CONGRESS) ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಇನ್ನೂ ಮೂರು ತಿಂಗಳು ಮಾತ್ರ ರಾಜ್ಯ ಬಿಜೆಪಿ ಸರ್ಕಾರ ಇರುತ್ತೆ. ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಹೇಳಿದರು. ಇತ್ತ ಸಿದ್ಧರಾಮಯ್ಯ ಅವರು ಮಾತನಾಡುತ್ತಿದ್ದರೆ, ಅತ್ತ ಸಮಾವೇಶಕ್ಕೆ ಬಂದಿದ್ದ ಜನರು ಡಿಕೆ ಡಿಕೆ ಎಂದು ಘೋಷಣೆ ಕೂಗಿದರು. ಇದಕ್ಕೆ ಸಿಟ್ಟಾದ ಸಿದ್ಧರಾಮಯ್ಯ ನಿಗಿ ನಿಗಿ ಕೆಂಡವಾದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.