ಸಾರ್ವಜನಿಕ ಸಭೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿಯನ್ನು ಎಚ್ಚರಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಸಿದ್ದರಾಮಯ್ಯ ಎಚ್ಚರಿಕೆ ನೀಡುತ್ತಿರುವುದು ಸಿದ್ದರಾಮಯ್ಯ ಅವರ ಘನತೆಗೆ ಶೋಭೆ ನೀಡದು.
ವಿಜಯನಗರ: ರಾಜಕೀಯ ಮುಖಂಡರು ಜನರನ್ನು ಮೆಚ್ಚಿಸುವ ಭರದಲ್ಲಿ ಸರ್ಕಾರಿ ಅಧಿಕಾರಿಗಳ (officials) ಮೇಲೆ ಜೋರು ನಡೆಸುವ ಕೆಟ್ಟ ಮತ್ತು ಹೇವರಿಕೆ ಹುಟ್ಟಿಸುವ ಸಂಪ್ರದಾಯದಿಂದ ಕನ್ನಡಿಗ ಬೇಜಾರುಗೊಳ್ಳುತ್ತಿದ್ದಾನೆ. ಅಸಲಿಗೆ ಮುಖಂಡರು ಅಧಿಕಾರಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಕುಣಿಸುತ್ತಾರೆ. ಹೊಸಪೇಟೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಜಯನಗರದ ಜಿಲ್ಲಾಧಿಕಾರಿ ಕಬ್ಬಿನ ಗಾಣಗಳನ್ನು ಮುಚ್ಚಿಸುತ್ತಿರುವ ಕ್ರಮದ ವಿರುದ್ಧ ಎಚ್ಚರಿಕೆ ನೀಡುತ್ತಿದ್ದಾರೆ. ಆ ಜಿಲ್ಲಾಧಿಕಾರಿ ಸಚಿವ ಅನಂದ್ ಸಿಂಗ್ (Anand Singh) ಹೇಳಿದ್ದನ್ನು ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಏನು ಮಾಡಬೇಕು? ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಚಿವರು, ಶಾಸಕರು ಬಿಡುತ್ತಾರೆಯೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಸಿದ್ದರಾಮಯ್ಯ ಎಚ್ಚರಿಕೆ ನೀಡುತ್ತಿರುವುದು ಅವರ ಘನತೆಗೆ ಶೋಭೆ ನೀಡದು ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ