ರಾಜಕೀಯ ಮುಖಂಡರು ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳದಿದ್ದರೆ ಏನೆಲ್ಲ ಅನಾಹುತಗಳು!
ಮಧುಗಿರಿಯ ಪಿಎಸ್ ಐ ರಮೇಶ್ ಪಕ್ಷದ ಕಾರ್ಯಕರ್ತರಿಗೆ ಚಪ್ಪಲಿ ಹಾರ ತೆಗೆಯಿರಿ ಅಂದಿದ್ದಕ್ಕೆ ಅವರ ನಡುವೆ ಮಾತಿನ ಚಕಮಕಿ ಶುರುವಿಟ್ಟುಕೊಂಡಿದೆ. ರಾಜಣ್ಣ ಮಾತಾಡುವಾಗ ಸ್ವಲ್ಪ ಸಂಯಮ ಪ್ರದರ್ಶಿಸಿದ್ದರೆ ಇದೆಲ್ಲ ಆಗುತಿತ್ತೇ?
ತುಮಕೂರು: ಒಂದು ಹಾಡಿದೆ, ಹಳೆ ಕನ್ನಡ ಸಿನಿಮಾದ್ದು, ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡೋ ನಾಲಿಗೆ…’ ಅಂತ. ಕಾಂಗ್ರೆಸ್ ಮಾಜಿ ಶಾಸಕ ಕೆ ಎನ್ ರಾಜಣ್ಣ (KN Rajanna) ಅವರು ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ವಿಚಾರದಲ್ಲಿ ಆಡಿದ ಅಪದ್ಧ, ಅಪ್ರಬುದ್ಧ ಮಾತುಗಳನ್ನು ಕೇಳಿಸಿಕೊಂಡವರಿಗೆ ಈ ಹಾಡು ನೆನಪು ಬಂದಿದ್ದರೆ ಆಶ್ಚರ್ಯವಿಲ್ಲ. ಆ ಕಾರಣಕ್ಕಾಗೇ ಮಧುಗಿರಿಯ ಐಬಿ ಬಳಿ ಜೆಡಿ(ಎಸ್) ಕಾರ್ಯಕರ್ತರು ರಾಜಣ್ಣನ ಪ್ರತಿಕೃತಿಗೆ (effigy) ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಧುಗಿರಿಯ ಪಿಎಸ್ ಐ ರಮೇಶ್ ಪಕ್ಷದ ಕಾರ್ಯಕರ್ತರಿಗೆ ಚಪ್ಪಲಿ ಹಾರ ತೆಗೆಯಿರಿ ಅಂದಿದ್ದಕ್ಕೆ ಅವರ ನಡುವೆ ಮಾತಿನ ಚಕಮಕಿ ಶುರುವಿಟ್ಟುಕೊಂಡಿದೆ. ರಾಜಣ್ಣ ಮಾತಾಡುವಾಗ ಸ್ವಲ್ಪ ಸಂಯಮ ಪ್ರದರ್ಶಿಸಿದ್ದರೆ ಇದೆಲ್ಲ ಆಗುತಿತ್ತೇ? ಅದಕ್ಕೆ ಹೇಳಿದ್ದು: ಆಚಾರವಿಲ್ಲದ ನಾಲಗೆ…
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಕಾಮುಕ ಶಿಕ್ಷಕನ ವಿಡಿಯೋ ವೈರಲ್