Karnataka Assembly Session; ಗೋವಿಂದೇಗೌಡರ ಫೋಟೋ ಈಗಲೂ ಕೆಲ ಶಿಕ್ಷಕರು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ: ಸುರೇಶ್ ಕುಮಾರ್
ಸರ್ಕಾರೀ ಶಾಲೆಗಳ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆ, ಈ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ಅವರಲ್ಲಿ ನಂಬಿಕೆಯಿಲ್ಲ, ಇಲ್ಲಿ ಸೇರಿಸಿದರೆ ಮಕ್ಕಳು ಓದಲ್ಲ ಅನ್ನೋದು ಖಾತರಿಯಾಗಿರುವ ಕಾರಣ ಕಾನ್ವೆಂಟ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹಾಗೆ ನೋಡಿದರೆ, ಸರ್ಕಾರೀ ಶಾಲೆಗಳಲ್ಲಿ ಈಗ ಉತ್ತಮ ಶಿಕ್ಷಕರಿದ್ದಾರೆ, ಸರ್ಕಾರ ಎಲ್ಲ ಸವಲತ್ತುಗಳನ್ನು ಅವರಿಗೆ ನೀಡುತ್ತಿದೆ, ಆದರೆ ಶಿಕ್ಷಣದ ಗುಣಮಟ್ಟ ಮಾತ್ರ ನಶಿಸುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಬೆಂಗಳೂರು, ಆಗಸ್ಟ್ 22: ಮಾಜಿ ಶಿಕ್ಷಣ ಸಚಿವರೂ ಆಗಿರುವ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಇಂದು ಸದನದಲ್ಲಿ ತಮ್ಮ ಶಿಕ್ಷಣ ಮತ್ತು ಇವತ್ತಿನ ಸರ್ಕಾರೀ ಶಾಲೆಗಳ ಶಿಕ್ಷಣದ ಗುಣಮಟ್ಟದ ಬಗ್ಗೆ ಅತ್ಯಂತ ಅರ್ಥಗರ್ಭಿತವಾಗಿ ಮಾತಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಗೆ (department of public instruction) ಚಿರಋಣಿಯಾಗಿದ್ದೇನೆಂದು ಹೇಳಿದ ಅವರು ತಮ್ಮ ತಾಯಿ ಒಬ್ಬ ಸರ್ಕಾರೀ ಶಾಲಾ ಶಿಕ್ಷಕಿಯಾಗಿ 37-ವರ್ಷ ಸೇವೆ ಸಲ್ಲಿಸಿದರೆಂದು ಹೇಳಿದರು. ಅನುದಾನಿತ ಶಾಲೆಯೊಂದರಲ್ಲಿ ಓದಿದ ತನಗೆ ಆಲ್-ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಅನ್ನು ಗೆದ್ದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಕಾಶ್ ಪಡುಕೋಣೆ ಕ್ಲಾಸ್ಮೇಟ್ ಆಗಿದ್ದರು ಎಂದು ಹೇಳಿದರು. ಶಿಕ್ಷಣ ಸಚಿವರಾಗಿ ಗೋವಿಂದೇಗೌಡ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದ್ದು ಮತ್ತು ಅವರ ಫೋಟೋವನ್ನು ಇವತ್ತುಗೂ ಹಲವಾರು ಶಿಕ್ಷಕರು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದ ಸುರೇಶ್, ಗೋವಿಂದೇಗೌಡರಿಗೆ ತದ್ವಿರುದ್ಧವಾಗಿ ಮತ್ತೊಬ್ಬ ಶಿಕ್ಷಣ ಸಚಿವ, ಶಿಕ್ಷಣ ಕ್ಷೇತ್ರವನ್ನೇ ಅನುತ್ಪಾದಕ ಕ್ಷೇತ್ರ ಎಂದು ಹೇಳಿ ಕುಖ್ಯಾತಿಗೆ ಪಾತ್ರರಾಗಿದ್ದರು ಎಂದರು.
ಇದನ್ನೂ ಓದಿ: Karnataka Assembly Session: ಪೂರಕ ಬಜೆಟ್ನಲ್ಲಿ ವಯನಾಡ್ ಸಂತ್ರಸ್ತರಿಗೆ ₹10 ಕೋಟಿ ನೀಡಿರುವ ಔಚಿತ್ಯ ಪ್ರಶ್ನಿಸಿದ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
