ಮೈಸೂರು: ದಿಢೀರನೆ ಜಿಟಿ ದೇವೇಗೌಡರ ಮನೆಗೆ ಭೇಟಿ ನೀಡಿದ ಸಿಎಂ ಇಬ್ರಾಹಿಂ
ತಮ್ಮ ಹೆಸರಿನೊಂದಿಗೆ ಸಿಎಂ ಹೊಂದಿರುವ ಇಬ್ರಾಹಿಂ ಸಾಹೇಬರು ಇನ್ನೂ ರಾಜಕೀಯದಲ್ಲಿದ್ದಾರೆಯೇ ಎಂಬ ಗೊಂದಲ ಖಂಡಿತವಾಗಿಯೂ ಕನ್ನಡಿಗರಲ್ಲಿದೆ. ಜೆಡಿಎಸ್ನಿಂದ ಹೊರಬಿದ್ದ ಅಥವಾ ಉಚ್ಛಾಟನೆಗೊಂಡ ಬಳಿಕ ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಕಾಂಗ್ರೆಸ್ ಇಬ್ರಾಹಿಂ ಮಗನನ್ನು ಪಕ್ಷಕ್ಕೆ ಸೇರಿಸಿಕೊಂಡಿದಿಯೇ ಹೊರತು ಅವರಿಗಿನ್ನೂ ಬಾಗಿಲು ತೆರೆದಿಲ್ಲ.
ಮೈಸೂರು: ಹಿರಿಯ ರಾಜಕಾರಣಿ ಮತ್ತು ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಸಿಎಂ ಇಬ್ರಾಹಿಂ ಇಂದು ನಗರದಲ್ಲಿರುವ ಜಿಟಿ ದೇವೇಗೌಡರ ಮನೆಗೆ ಭೇಟಿ ನೀಡಿದರು. ದೇವೇಗೌಡರ ಮನೆ ಮುಂದೆ ನಿಂತು ತಾವು ಬಂದಿರುವ ಬಗ್ಗೆ ಅವರು ಫೋನ್ ಮಾಡಿ ತಿಳಿಸಿದರು. ಗೌಡ್ರು ಮನೇಲಿದ್ದರೋ ಅಥವಾ ಹೊರಗೋ ಗೊತ್ತಾಗಲಿಲ್ಲ, ಬರ್ತೀನಿ ಇರಿ ಅಂತ ಅವರು ಪೋನಲ್ಲಿ ಹೇಳಿದ್ದು ಮಾತ್ರ ಕೇಳಿಸುತ್ತದೆ. ಇಬ್ರಾಹಿಂ ಮತ್ತು ದೇವೇಗೌಡ ಇಬ್ಬರೂ ನೊಂದಜೀವಿಗಳು ಮತ್ತು ಸದ್ಯಕ್ಕಂತೂ ಸಮಾನಮನಸ್ಕರು! ಗೌಡರು ಮತ್ತು ಕುಮಾರಸ್ವಾಮಿ ಸಂಬಂಧ ಹಳಸಿದೆ, ಇದೇ ಹಿನ್ನೆಲೆಯಲ್ಲಿ ಇಬ್ರಾಹಿಂ ಗೌಡರ ಮನೆಗೆ ಬಂದಿರಲಿಕ್ಕೂ ಸಾಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಇಬ್ರಾಹಿಂ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಸಚಿವ ಜಮೀರ್ ಅಹ್ಮದ್, ನೆಕ್ಸ್ಟ್ ತಂದೆಯ ಸರದಿ?
Published on: Nov 25, 2024 04:07 PM
Latest Videos