ಮಹಾರಾಷ್ಟ್ರದಲ್ಲಿ ಮುಸ್ಲಿಮೇತರ ಸಮುದಾಯಗಳು ಒಂದುಗೂಡಿದ ಹಾಗೆ ಚನ್ನಪಟ್ಟಣದಲ್ಲಿ ಆಗಲಿಲ್ಲ: ಅಶೋಕ

ಮಹಾರಾಷ್ಟ್ರದಲ್ಲಿ ಮುಸ್ಲಿಮೇತರ ಸಮುದಾಯಗಳು ಒಂದುಗೂಡಿದ ಹಾಗೆ ಚನ್ನಪಟ್ಟಣದಲ್ಲಿ ಆಗಲಿಲ್ಲ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2024 | 2:43 PM

ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆ ಫಲಿತಾಂಶಗಳನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪೋಸ್ಟ್​ ಮಾರ್ಟಮ್ ಮಾಡುವ ಕೆಲಸ ಅರಂಭಿಸಿದ್ದಾರೆ. ಮುಸ್ಲಿಂ ಸಮುದಾಯದ ಹಾಗೆ ಬೇರೆ ಸಮುದಾಯದ ಮತದಾರರು ಸಹ ಜೆಡಿಎಸ್ ಕೈ ಬಿಟ್ಟರು, ಮಹಾರಾಷ್ಟ್ರದಲ್ಲಿ ನಡೆದಂತೆ ಇಲ್ಲಿ ನಡೆಯಲಿಲ್ಲ ಎಂದು ಅಶೋಕ ಹೇಳಿದರು.

ಬೆಂಗಳೂರು: ನಗರದಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು, ಚನ್ನಪಟ್ಟಣನದಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿರುವುದಕ್ಕೆ ಮುಸ್ಲಿಂ ಮರದಾರರರು ವಿಮುಖರಾಗಿದ್ದು ಕಾರಣವಾಯಿತು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿರುವುದು ಸುಳ್ಳಲ್ಲ, ಬೂತ್​ಗಳಲ್ಲಿ ನಡೆದ ಮತದಾನ ನಡೆದ ಪ್ರಕ್ರಿಯೆ ಗಮನಿಸಿದಾಗ ಅದು ಗೊತ್ತಾಗುತ್ತದೆ, ಮುಸ್ಲಿಂ ಪ್ರಾಬಲ್ಯದ ಬೂತ್​ಗಳಲ್ಲಿ ನಿಖಿಲ್​ಗೆ ಐದ್ಹತ್ತು ವೋಟುಗಳು ಮಾತ್ರ ಸಿಕ್ಕಿವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಪಿಎಲ್ ಕಾರ್ಡುಗಳನ್ನು ಮೊದಲಿದ್ದ ಹಾಗೆ ಬಡವರಿಗೆ ಹಿಂತಿರುಗಿಸದಿದ್ದರೆ ಉಗ್ರ ಹೋರಾಟ: ಆರ್​. ಅಶೋಕ