ಕೆ. ಶಿವರಾಮ್ ನೋಡಲು ಆಸ್ಪತ್ರೆಗೆ ಬಂದ ಮಾಜಿ ಸಿಎಂ ಯಡಿಯೂರಪ್ಪ
ಕೆ ಶಿವರಾಮ್ಗೆ ಹೃದಯಾಘಾತವಾಗಿದೆ. ಇದರ ಜೊತೆಗೆ ಅವರ ಮಿದುಳು ಕೂಡ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ. ಅವರನ್ನು ಸದ್ಯ ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಐಸಿಯುನಲ್ಲಿ ಇದ್ದಾರೆ. ಶಿವರಾಮ್ ಅವರನ್ನು ನೋಡಲು ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ಬಂದಿದ್ದರು.
ಕನ್ನಡದ ನಟ ಕೆ ಶಿವರಾಮ್ (K Shivaram) ಅವರಿಗೆ ಹೃದಯಾಘಾತವಾಗಿದೆ. ಇದರ ಜೊತೆಗೆ ಅವರ ಮಿದುಳು ಕೂಡ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ. ಅವರನ್ನು ಸದ್ಯ ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಐಸಿಯುನಲ್ಲಿ ಇದ್ದಾರೆ. ಶಿವರಾಮ್ ಅವರನ್ನು ನೋಡಲು ಇಂದು (ಫೆಬ್ರವರಿ 29) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ಬಂದಿದ್ದರು. ಶಿವರಾಮ್ ಪರಿಸ್ಥಿತಿ ನೋಡಿ ಯಡಿಯೂರಪ್ಪ ಅವರು ಮರುಗಿದ್ದಾರೆ. ‘ಬಾ ನಲ್ಲೆ ಮಧು ಚಂದ್ರಕೆ’ ಸೇರಿದಂತೆ ಇನ್ನೂ ಹಲವು ಕನ್ನಡ ಚಿತ್ರಗಳಲ್ಲಿ ಶಿವರಾಮ್ ಅವರು ನಟಿಸಿದ್ದಾರೆ. ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಅನ್ನೋದು ವಿಶೇಷ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos