ಕೆ. ಶಿವರಾಮ್​ ಪರಿಸ್ಥಿತಿ ಚಿಂತಾಜನಕ ಆಗಿದೆ; ಬೇಸರದ ಸುದ್ದಿ ತಿಳಿಸಿದ ಬೆಂಬಲಿಗರು

ಕೆ. ಶಿವರಾಮ್​ ಪರಿಸ್ಥಿತಿ ಚಿಂತಾಜನಕ ಆಗಿದೆ; ಬೇಸರದ ಸುದ್ದಿ ತಿಳಿಸಿದ ಬೆಂಬಲಿಗರು

Mangala RR
| Updated By: ಮದನ್​ ಕುಮಾರ್​

Updated on: Feb 28, 2024 | 5:48 PM

ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಕೆ. ಶಿವರಾಮ್​ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ ಎಂದು ಬೆಂಬಲಿಗರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಹೊರಗೆ ಟಿವಿ9 ಜತೆ ಮಾತನಾಡಿದ ಬೆಂಬಲಿಗರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಸರ್ಕಾರದಿಂದ ಉತ್ತಮ ಚಿಕಿತ್ಸೆ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಐಎಎಸ್​ ಅಧಿಕಾರಿಯಾಗಿ, ಸಿನಿಮಾ ನಟನಾಗಿ ಮತ್ತು ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡ ಕೆ. ಶಿವರಾಮ್​ (K Shivaram) ಅವರ ಆರೋಗ್ಯ ಕೈಕೊಟ್ಟಿದೆ. 71ರ ಪ್ರಾಯದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಬಳಿ ಶಿವರಾಮ್​ ಅವರ ಬೆಂಬಲಿಗರು ಜಮಾಯಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂದು ವಿವರ (K Shivaram Health Update) ನೀಡಿದ್ದಾರೆ. ‘ಶಿವರಾಮ್​ ಅವರ ಸ್ಥಿತಿ ಗಂಭೀರವಾಗಿದೆ. ಚಿಂತಾಜನಕ ಆಗಿರುವುದರಿಂದ ನಾವು ಕೂಡ ಅಸಹಾಯಕರಾಗಿದ್ದೇವೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಇದ್ದರೂ ಕೂಡ ಶಿವರಾಮ್​ ಅವರಿಗೆ ಸಾಕಾಗುತ್ತಿಲ್ಲ. ನಾವು ಎಲ್ಲ ಪಕ್ಷದವರ ಗಮನಕ್ಕೆ ತರುತ್ತೇವೆ. ಶಿವರಾಮ್​ ಅವರು ಎಲ್ಲ ಸಮುದಾಯದವರಿಗೂ ಸಹಾಯ ಮಾಡಿದವರು. ಐಎಎಸ್​ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಬಳಿಕವೂ ಕಳಕಳಿ ಹೊಂದಿದ್ದರು. ಛಲವಾದಿ ಸಮುದಾಯದಿಂದ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಆಡಳಿತ ಪಕ್ಷದವರು ನುರಿತ ವೈದ್ಯರನ್ನು ಕರೆಸಿ ಹೆಚ್ಚಿನ ಚಿಕಿತ್ಸೆ ನೀಡಲಿ’ ಎಂದು ಶಿವರಾಮ್​ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.