Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಲಾಟದ ಪಾತ್ರಧಾರಿಗಳೊಂದಿಗೆ ಕುಣಿದು ಕುಪ್ಪಳಿಸಿ ಜನರನ್ನು ರಂಜಿಸಿದ ಶ್ರೀರಾಮುಲು

ಬಯಲಾಟದ ಪಾತ್ರಧಾರಿಗಳೊಂದಿಗೆ ಕುಣಿದು ಕುಪ್ಪಳಿಸಿ ಜನರನ್ನು ರಂಜಿಸಿದ ಶ್ರೀರಾಮುಲು

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 10:58 AM

ಅವರ ಕುಣಿತ ನೋಡಿ, ಕೈಯಲ್ಲಿ ಖಡ್ಗ ಹಿರಿದು ಅಕ್ಷರಶಃ ಬಯಲಾಟದ ಪಾತ್ರಧಾರಿಯತೆ ಹೆಜ್ಜೆ ಹಾಕುತ್ತಾರೆ. ತಮ್ಮ ಜನನಾಯಕ ವೇದಿಕೆ ಮೇಲೆ ಹಾಗೆ ಕುಣಿದರೆ, ಜನರ ಶಿಳ್ಳು, ಚಪ್ಪಾಳೆ ಮಿಸ್ಸಾಗೋದು ಸಾಧ್ಯವೇ? ಜನ ಮತ್ತು ಶ್ರೀರಾಮುಲು ಬಯಲಾಟವನ್ನು ಭಾರೀ ಎಂಜಾಯ್ ಮಾಡಿದ್ದರಲ್ಲಿ ಎರಡು ಮಾತಿಲ್ಲ.

ಬಳ್ಳಾರಿ: ತಮ್ಮ ಕಾಲೇಜು ದಿನಗಳಲ್ಲಿ ಸಿನಿಮಾ ನಟನಾಗುವ ಆಸೆಯಿತ್ತು ಎಂದು ಹಿಂದೊಮ್ಮೆ ಮಾಜಿ ಶಾಸಕ ಬಿ ಶ್ರೀರಾಮುಲು (B Sriramulu) ಹೇಳಿದ್ದರು. ಅವರ ಆಸೆ ಕೈಗೂಡಲಿಲ್ಲ, ರಾಜಕೀಯಕ್ಕೆ ಬಂದು ರಾಜ್ಯದ ಮಂತ್ರಿ (Minister) ಆದರು. ಆದರೆ, ಸಿನಿಮಾ ಮತ್ತು ನಾಟಕದ ಗೀಳು ಅವರಲ್ಲಿ ಈಗಲೂ ಇದೆ. ನಿನ್ನೆ ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ (Hadligi) ಆಯೋಜಿಸಲಾಗಿದ್ದ ಬಯಲಾಟ ಕಾರ್ಯಕ್ರಮವೊಂದರಲ್ಲಿ ಪಾತ್ರಧಾರಿಗಳ ಅವರು ಜೊತೆ ಕುಣಿದರು. ಕರಾವಳಿ ಮತ್ತು ಮಲ್ನಾಡು ಪ್ರದೇಶಗಳ ಯಕ್ಷಗಾನದಂತೆ ಉತ್ತರ ಕರ್ನಾಟಕದಲ್ಲಿ ಬಯಲಾಟ, ದೊಡ್ಡಾಟಗಳನ್ನು ಆಯೋಜಿಸಲಾಗುತ್ತದೆ ಮತ್ತು ಜನರಲ್ಲಿ ಅವುಗಳ ಬಗ್ಗೆ ಈಗಲೂ ಕ್ರೇಜ್ ಇದೆ. ಶ್ರೀರಾಮುಲು ಬಯಲಾಟಗಳನ್ನು ನೋಡುತ್ತಾ ಬೆಳೆದವರು. ಹಾಗಾಗಿ ಬಯಲಾಟದ ವೇದಿಕೆ ನೋಡಿದಾಕ್ಷಣ ಅವರಿಗೆ ತಮ್ಮಲ್ಲಿ ಹುದುಗಿದ್ದ ಆಸೆಯನ್ನು ಅನಾವರಣಗೊಳಿಸಿಕೊಳ್ಳುವ ಆಸೆ ಹುಟ್ಟಿರಬಹುದು. ಅವರ ಕುಣಿತ ನೋಡಿ, ಕೈಯಲ್ಲಿ ಖಡ್ಗ ಹಿರಿದು ಅಕ್ಷರಶಃ ಬಯಲಾಟದ ಪಾತ್ರಧಾರಿಯತೆ ಹೆಜ್ಜೆ ಹಾಕುತ್ತಾರೆ. ತಮ್ಮ ಜನನಾಯಕ ವೇದಿಕೆ ಮೇಲೆ ಹಾಗೆ ಕುಣಿದರೆ, ಜನರ ಶಿಳ್ಳು, ಚಪ್ಪಾಳೆ ಮಿಸ್ಸಾಗೋದು ಸಾಧ್ಯವೇ? ಜನ ಮತ್ತು ಶ್ರೀರಾಮುಲು ಬಯಲಾಟವನ್ನು ಭಾರೀ ಎಂಜಾಯ್ ಮಾಡಿದ್ದರಲ್ಲಿ ಎರಡು ಮಾತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯೊಂದಿಗೆ ಕೆಆರ್​ಪಿಪಿಯನ್ನು ವಿಲೀನಗೊಳಿಸಿದ ಜನಾರ್ಧನರೆಡ್ಡಿ, ಶ್ರೀರಾಮುಲುರನ್ನು ಆತ್ಮೀಯ ಸ್ನೇಹಿತ ಎಂದರು!