ಏತ ನೀರಾವರಿ ಯೋಜನೆ ಉದ್ಘಾಟನೆಗೆ ಹೋದ ಮಾಜಿ ಸಚಿವ ರೇವಣ್ಣ ಮೋಟಾರು ಸ್ಟಾರ್ಟ್ ಆಗದಿದ್ದಾಗ ತಾಳ್ಮೆ ಕಳೆದುಕೊಂಡರು

ಏತ ನೀರಾವರಿ ಯೋಜನೆ ಉದ್ಘಾಟನೆಗೆ ಹೋದ ಮಾಜಿ ಸಚಿವ ರೇವಣ್ಣ ಮೋಟಾರು ಸ್ಟಾರ್ಟ್ ಆಗದಿದ್ದಾಗ ತಾಳ್ಮೆ ಕಳೆದುಕೊಂಡರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2021 | 9:49 PM

ಹಾಸನ ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ಶುಕ್ರವಾರದಂದು ರೇವಣ್ಣ ಅವರು ಏತ ನೀರಾವರಿ ಯೋಜನೆಯೊಂದನ್ನು ಉದ್ಘಾಟಿಸಲು ಹೋಗಿದ್ದರು. ರೇವಣ್ಣ ಪದೇಪದೆ ಮಾಡಲು ಪ್ರಯತ್ನಿಸಿದರೂ ಹಾಳಾದ್ದು ಮೋಟಾರು ಸ್ಟಾರ್ಟ್ ಆಗಲೇ ಇಲ್ಲ.

ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿ (ಎಸ್) ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ ಅವರ ಸುಪುತ್ರ ಹೆಡ್ ಡಿ ರೇವಣ್ಣ ಅವರು ವಯಸ್ಸಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರಿಗಿಂತ ಎರಡು ವರ್ಷ ಹಿರಿಯರಾದರೂ ಕಿರಿಯ ಸಹೋದರಿನಿಗಿಂತ ಜನಪ್ರಿಯರಲ್ಲ. ಹಾಗಂತ ಅವರು ಯಾವತ್ತೂ ತಮ್ಮನ ಏಳ್ಗೆ ಬಗ್ಗೆ ಅಸಮಾಧಾನಪಟ್ಟುಕೊಂಡವರಲ್ಲ. ಜೆಡಿ (ಎಸ್) ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದಾಗೆಲ್ಲ ರೇವಣ್ಣ ಅವರು ಮಂತ್ರಿಗಿರಿ ಗಿಟ್ಟಿಸಿದ್ದಾರೆ. ರೇವಣ್ಣ ಅಧಿಕಾರದಲ್ಲಿರಲಿ ಬಿಡಲಿ, ಹಾಸನ ಭಾಗದಲ್ಲಿ ಜನಪ್ರಿಯ ನಾಯಕರೆನ್ನುವ ಬಗ್ಗೆ ಎರಡು ಮಾತಿಲ್ಲ.

ರೇವಣ್ಣ, ರಾಜಕೀಯೇತರ ವಿಷಯಗಳಿಗೆ ಸುದ್ದಿಯಾಗುತ್ತಾರೆ. ಅವರು ಹೆಚ್ಚು ಧಾರ್ಮಿಕ ಮನೋಭಾವದವರು ಅಂತ ರಾಜ್ಯದ ಜನತೆಗೆ ಗೊತ್ತಿದೆ. ಅವರ ಕೈಯಲ್ಲಿ ಸದಾ ನಿಂಬೆ ಹಣ್ಣು ಇರುತ್ತದೆ, ಕೆಲವು ಸಲ ಒಂದಕ್ಕಿಂತ ಜಾಸ್ತಿ ಇರುವುದೂ ಉಂಟು. ವಿರೋಧ ಪಕ್ಷದ ನಾಯಕರು ಅವರ ಅಭ್ಯಾಸವನ್ನು ಗೇಲಿ ಮಾಡಿದ ಹಲವಾರು ಪ್ರಸಂಗಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೆ, ರೇವಣ್ಣ ಅಂಥದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಜಾಯಮಾನದವರಲ್ಲ. ಈಗ ಅವರ ಮಗ ಮತ್ತು ಸಂಸದ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಮಿಂಚುತ್ತಿದ್ದಾರೆ.

ಸರಿ ವಿಷಯಕ್ಕೆ ಬರೋಣ. ಹಾಸನ ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ಶುಕ್ರವಾರದಂದು ರೇವಣ್ಣ ಅವರು ಏತ ನೀರಾವರಿ ಯೋಜನೆಯೊಂದನ್ನು ಉದ್ಘಾಟಿಸಲು ಹೋಗಿದ್ದರು. ರೇವಣ್ಣ ಪದೇಪದೆ ಮಾಡಲು ಪ್ರಯತ್ನಿಸಿದರೂ ಹಾಳಾದ್ದು ಮೋಟಾರು ಸ್ಟಾರ್ಟ್ ಆಗಲೇ ಇಲ್ಲ. ಅಲ್ಲಿದ್ದ ಅಧಿಕಾರಿ ಮತ್ತು ಇತರ ಸಿಬ್ಬಂದಿ ಏನೆಲ್ಲ ಪ್ರಯತ್ನಪಟ್ಟರೂ ಮೋಟಾರು ಮಾತ್ರ ಮುನಿಸಿಕೊಂಡೇ ಇತ್ತು. ಆಗ ತಾಳ್ಮೆ ಕಳೆದುಕೊಂಡ ಮಾಜಿ ಸಚಿವರು ಅಧಿಕಾರಿಗಳ ಮೇಲೆ ಹರಿಹಾಯ್ದರು. ಅಂತಿಮವಾಗಿ ಮೋಟಾರು ಡರ್ರರ್ ಅಂತ ಸ್ಟಾರ್ಟ್ ಆದಾಗ ಅವರ ಮುಖದಲ್ಲಿ ಮಂದಹಾಸ ಮೂಡಿತು.

ಇದನ್ನೂ ಓದಿ: Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್