ಮೈಸೂರಲ್ಲಿ ಅಪಘಾತಕ್ಕೀಡಾದ ಬೈಕ್ ಸವಾರನಿಗೆ ಮಾಜಿ ಶಾಸಕ ಎಮ್ ಕೆ ಸೋಮಶೇಖರ್ ನೆರವಾದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2022 | 8:31 PM

ಸೋಮಶೇಖರ್ ಅವರು ಪಕ್ಷ ಈಗ ಅಧಿಕಾರದಲ್ಲಿರಬಹುದು ಮತ್ತು ಅವರು ಶಾಸಕರೂ ಅಲ್ಲದಿರಬಹುದು. ಆದರೆ, ಒಮ್ಮೆ ಜನ ಪ್ರತಿನಿಧಿ ಅನಿಸಿಕೊಂಡವರು ಕೊನೆವರೆಗೂ ಹಾಗೆಯೇ ಗುರುತಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ರಸ್ತೆಗಳ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕಿದೆ.

ಮೈಸೂರಿನ ಮಾಜಿ ಶಾಸಕ ಎಮ್ ಕೆ ಸೋಮಶೇಖರ್ (MK Somashekhar) ಅವರು ಶನಿವಾರದಂದು ನಗರದ ಕುವೆಂಪುನಗರದಲ್ಲಿ ಅಫಘಾತಕ್ಕೀಡಾಗಿ ನೆಲದ ಮೇಲೆ ಬಿದ್ದಿದ್ದ ಯುವ ಬೈಕ್ ಸವಾರನೊಬ್ಬನಿಗೆ (biker) ನೆರವಾಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದ್ದಾರೆ. ಸದರಿ ಬೈಕ್ ಸವಾರ ಶನಿವಾರ ಬೆಳಗ್ಗೆ ರಸ್ತೆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ ಹಿಂದಿನಿಂದ ಬಂದ ಕಾರೊಂದು ಅವರ ವಾಹನಕ್ಕೆ ಗುದ್ದಿದೆ. ಬೈಕ್ ಸವಾರನಿಗೆ ಗಂಭೀರ ಸ್ವರೂಪ ಗಾಯವಾಗದಿರೋದು ಅದೃಷ್ಟವೇ. ಅದೇ ಸಮಯಕ್ಕೆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದ ಕಾಂಗ್ರೆಸ್ (Congress) ಪಕ್ಷದ ಮಾಜಿ ಶಾಸಕ ಸೋಮಶೇಖರ್ ತಮ್ಮ ಕಾರು ನಿಲ್ಲಿಸಿ ಸವಾರನ ನೆರವಿಗೆ ಧಾವಿಸಿದ್ದಾರೆ. ಅವರು ಕೆಲ ಬೆಂಬಲಿಗರೂ ಜೊತೆಗಿದ್ದಾರೆ. ನೆಲಕ್ಕೆ ಬಿದ್ದಿದ್ದ ಸವಾರನಿಗೆ ಮೇಲೆಬ್ಬಿಸಿ, ನೀರು ಕುಡಿಸಿದ್ದಾರೆ. ಅವರು ಸುಧಾರಿಸಿಕೊಂಡ ಬಳಿಕ ಅಟೋವೊಂದರಲ್ಲಿ ಗಾಯಗೊಂಡ ವ್ಯಕ್ತಿಯನ್ನು ಅಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ರಸ್ತೆ ಅಪಘಾತಗಳು ನಡೆದಾಗ ಜನ ಸಹಾಯಕ್ಕೆ ಬರೋದು ಅಪರೂಪವಾಗುತ್ತಿರುವ ದಿನಗಳಲ್ಲಿ ಸೋಮಶೇಖರ್ ಅವರು ಹೀಗೆ ನೆರವಾಗಿದ್ದು ಅಭಿನಂದನೀಯ.

ಅಂದಹಾಗೆ, ಬೆಂಗಳೂರಿನ ಹಾಗೆ ಮೈಸೂರಲ್ಲೂ ರಸ್ತೆಗುಂಡಿ ಅಪಾರ ಸಂಖ್ಯೆಯಲ್ಲಿ ಸಿಗುತ್ತವೆ. ವಿಡಿಯೋನಲ್ಲಿ ಕಾಣುತ್ತಿರುವ ಕುವೆಂಪು ರಸ್ತೆಯ ಸ್ಥಿತಿ ನೋಡಿ ಹೇಗಿದೆ ಅಂತ. ಇಂಥ ರಸ್ತೆಗಳಲ್ಲಿ ಅಪಘಾತಗಳಾಗದಿದ್ದರೆ ಇನ್ನೇನಾಗುತ್ತವೆ?

ಸೋಮಶೇಖರ್ ಅವರು ಪಕ್ಷ ಈಗ ಅಧಿಕಾರದಲ್ಲಿರಬಹುದು ಮತ್ತು ಅವರು ಶಾಸಕರೂ ಅಲ್ಲದಿರಬಹುದು. ಆದರೆ, ಒಮ್ಮೆ ಜನ ಪ್ರತಿನಿಧಿ ಅನಿಸಿಕೊಂಡವರು ಕೊನೆವರೆಗೂ ಹಾಗೆಯೇ ಗುರುತಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ರಸ್ತೆಗಳ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕಿದೆ. ಅವರ ಹಾಗೆ ಮಾಡುತ್ತಾರೆ ಅಂತ ನಮಗೆ ಅನಿಸುತ್ತಿದೆ.

ಇದನ್ನೂ ಓದಿ:   ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು! ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಸ್ಟ್​​ ನಾನೇ: ಮೈಸೂರು ಶಾಸಕರಿಗೆ ಸಿಂಹ ಸವಾಲು