Loading video

ಮತ್ತೊಮ್ಮೆ ಬಸನಗೌಡ ಯತ್ನಾಳ್ ವಿಷಯದಲ್ಲಿ ಮೃದುಧೋರಣೆ ಪ್ರದರ್ಶಿಸಿದ ಎಂಪಿ ರೇಣುಕಾಚಾರ್ಯ

Updated on: Mar 13, 2025 | 4:57 PM

ಯಾರೋ ಒಂದಷ್ಟು ಜನ ಯತ್ನಾಳ್ ಹಾದಿ ತಪ್ಪಿಸುತ್ತಿದ್ದಾರೆ, ಹಿಂದೆ ತನ್ನನ್ನು ಸಹ ಬಿವೈ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಲಾಗಿತ್ತು, ರೆಸಾರ್ಟ್ ರಾಜಕಾರಣದಲ್ಲಿ ತಾನಾಗಿ ಭಾಗಿಯಾಗಿರಲಿಲ್ಲ, ಬಲವಂತದಿಂದ ಕರೆದೊಯ್ಯಲಾಗಿತ್ತು ಎಂದು ರೇಣುಕಾಚಾರ್ಯ ಹೇಳುತ್ತಾರೆ. ತಾನು ನಡೆಸುವ ಲಿಂಗಾಯತ ಸಮುದಾಯದ ಸಭೆಯಲ್ಲಿ ಯತ್ನಾಳ್ ಸಹ ಭಾಗವಹಿಸಲಿ ಎಂದು ಅವರು ಹೇಳಿದರು.

ಬೆಂಗಳೂರು, 13 ಮಾರ್ಚ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಜೊತೆಗಿನ ಸಂಬಂಧದ ಬಗ್ಗೆ ಎಂಪಿ ರೇಣುಕಾಚಾರ್ಯ (MP Renukacharya) ಏನೇ ಹೇಳಲಿ, ಅವರ ಧೋರಣೆಯಲ್ಲಿ ಬದಲಾವಣೆಯಾಗಿರುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಮಾಜಿ ಶಾಸಕ, ತಾನು ಯಾರಿಗೂ ಯೀಲ್ಡ್ ಆಗಲ್ಲ ಬೆಂಡ್ ಕೂಡ ಆಗಲ್ಲ, ಯತ್ನಾಳ್ ನಡೆಸಿದ ಸಭೆಯಲ್ಲಿ ಸಮಾಜದ ಬಹಳಷ್ಟು ಮುಖಂಡರು, ನಾಯಕರು, ಶಾಸಕರು ಭಾಗಿಯಾದ ಆತಂಕವೂ ತನಗಿಲ್ಲ ಎಂದು ಹೇಳಿದರು. ಯತ್ನಾಳ್ ತಮ್ಮ ಸಮಾಜದ ನಾಯಕರು ಸಂಘರ್ಷದ ಹಾದಿ ಬೇಡ, ಎಲ್ಲರಿ ಒಟ್ಟಾಗಿ ಸಾಗಿ ಸಮಾಜಕ್ಕೆ ಒಳ್ಳೇದನ್ನು ಮಾಡೋಣ ಅನ್ನೋದಷ್ಟೇ ತನ್ನ ಇಚ್ಛೆ ಎಂದು ರೇಣುಕಾಚಾರ್ಯ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯತ್ನಾಳ್​ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ: ರೇಣುಕಾಚಾರ್ಯ ವಾಗ್ದಾಳಿ