‘ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ’: ಗುಡುಗಿದ ಪ್ರತಾಪ್ ಸಿಂಹ
ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಗಣೇಶೋತ್ಸವ ಆಚರಣೆಗೆ ವಿಧಿಸಲಾಗುವ ನಿರ್ಬಂಧಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಂತಹ ಸ್ಥಳಗಳಲ್ಲಿ ಅದ್ದೂರಿಯಾಗಿ, ಶಾಂತಿಯುತವಾಗಿ ನಡೆಯುವ ವಿಸರ್ಜನೆಗೆ ಹೋಲಿಸಿದರೆ, ಕರ್ನಾಟಕದಲ್ಲಿ ಅನುಮತಿ ಪಡೆಯಲು ಜನ ಎದುರಿಸುವ ಸಮಸ್ಯೆಗಳನ್ನು ಟೀಕಿಸಿದ್ದಾರೆ. ಗಣೇಶೋತ್ಸವದ ಐತಿಹಾಸಿಕ ಮಹತ್ವವನ್ನು ಸ್ಮರಿಸಿದ್ದಾರೆ.
ನೆಲಮಂಗಲ, ಸೆಪ್ಟೆಂಬರ್ 27: ‘ನಾವು ಹಿಂದೂಗಳು ಎಂದಿಗೂ ಯಾರ ಮೇಲೂ ನಾವಾಗಿಯೇ ಮುಗಿಬೀಳುವುದಿಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನೆಲಮಂಗಲದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕಲ್ಲು ಹೊಡೆಯುವ ಸಂಸ್ಕೃತಿ ನಮ್ಮದಲ್ಲ, ಕಲ್ಲನ್ನೇ ವಿಗ್ರಹವನ್ನಾಗಿಸಿ ಪ್ರಾಣಪ್ರತಿಷ್ಠೆ ಮಾಡಿ ಪೂಜಿಸುವ ಪರಂಪರೆ ನಮ್ಮದು’ ಎಂದರು. ಇನ್ನು ‘ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವಕ್ಕೆ ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು, ಧ್ವನಿವರ್ಧಕ ಹಾಗೂ ಪಟಾಕಿಗೆ ನಿರ್ಬಂಧ ವಿಧಿಸುವುದು ಮತ್ತು ಬಾಂಡ್ ಬರೆಸಿಕೊಳ್ಳುವುದರ ಮೂಲಕ ಅನಗತ್ಯ ಕಿರಿಕಿರಿ ಉಂಟುಮಾಡಲಾಗುತ್ತಿದೆ. ಆಚರಣೆಯ ಹಿಂದಿನ ಉದ್ದೇಶವನ್ನು ಗೌರವಿಸಬೇಕು ಮತ್ತು ಅನಗತ್ಯ ನಿರ್ಬಂಧಗಳಿಂದ ಮುಕ್ತಗೊಳಿಸಬೇಕು’ ಎಂದು ಸರ್ಕಾರ ಎಚ್ಚರಿಕೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
