ಓರ್ವಳ ನಂಬಿಸಿ ದೈಹಿಕ ಸಂಪರ್ಕ, ಈಗ ಮತ್ತೊಬ್ಬಳ ಜೊತೆ ನಿಶ್ಚಿರ್ತಾರ್ಥ: ಯುವತಿ ಬಾಳಲ್ಲಿ ಕಾಂಗ್ರೆಸ್​​ ನಾಯಕನ ಚೆಲ್ಲಾಟ?

Edited By:

Updated on: May 01, 2026 | 1:06 PM

ಟಿ. ನರಸೀಪುರ ಪುರಸಭೆಯ ಮಾಜಿ ಅಧ್ಯಕ್ಷ ಮದನ್ ರಾಜ್ ವಿರುದ್ಧ ಲವ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಯುವತಿಯೊಬ್ಬಳು ಮದನ್ ರಾಜ್ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ಆದರೆ ಆತ ಈಗ ಬೇರೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಇನ್ನು ಪ್ರಕರಣ ದಾಖಲಾದ ಬಳಿಕ ಮದನ್ ರಾಜ್ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೈಸೂರು, ಮೇ 1: ಟಿ. ನರಸೀಪುರ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್​​ ನಾಯಕ ಮದನ್ ರಾಜ್ ವಿರುದ್ಧ ಲವ್ ಸೆಕ್ಸ್ ದೋಖಾ ಆರೋಪದಡಿ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳು ಹಲವು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಮದನ್ ರಾಜ್ ದೈಹಿಕ ಸಂಬಂಧ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿರೋದಾಗಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಮದನ್​​ ರಾಜ್​​ ಈಗ ಮತ್ತೋರ್ವ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನೆಪ ಹೇಳಿ, ಇಬ್ಬರು ಜೊತೆಯಾಗಿ ವಿಷ ಕುಡಿಯೋಣ ಎಂದು ಹೇಳಿ ಯುವತಿಗೆ ವಿಷ ಕುಡಿಸಿದ್ದ ಆರೋಪವೂ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 01, 2026 01:04 PM
Loading...
Unable to load recommendations.
Follow Us