ವಂಚನೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡು ಮಾಜಿ ಸಚಿವ ರಾಜೇಂದ್ರ ಬಾಲಾಜಿ ಹಾಸನದಲ್ಲಿ ಸೆರೆಸಿಕ್ಕರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2022 | 12:07 AM

ಎ ಐ ಎ ಡಿ ಎಮ್ ​ಕೆ ಆಡಳಿತದ ಸರ್ಕಾರದಲ್ಲಿ ಡೈರಿ ಅಭಿವೃದ್ಧಿ ಸಚಿವರಾಗಿದ್ದ ರಾಜೇಂದ್ರ ತಮ್ಮ ಬಂಧನದ ವಿರುದ್ಧ ಕೋರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಡಿಸೆಂಬರ್ 17ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ನಂತರ ತಲೆಮರೆಸಿಕೊಂಡಿದ್ದರು. ವಂಚನೆಯ ಎರಡು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ.

ಪೊಲೀಸರಿಂದ ಸುತ್ತುವರಿಯಲ್ಪಟ್ಟು ಬಂಧನಕ್ಕೊಳಗಾಗುತ್ತಿರುವ ವ್ಯಕ್ತಿಯನ್ನು ನೋಡಿ. ಮಫ್ತಿಯಲ್ಲಿರುವ ಪೊಲೀಸರು ತಮಿಳುನಾಡಿನವರು ಮತ್ತು ಬಂಧನಕ್ಕೊಗಾಗುತ್ತಿರುವ ವ್ಯಕ್ತಿ ಆ ರಾಜ್ಯದ ಮಾಜಿ ಸಚಿವ ಕೆ ಟಿ ರಾಜೇಂದ್ರ ಬಾಲಾಜಿ. ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆದಿದ್ದು ಮಾತ್ರ ನಮ್ಮ ಹಾಸನ ನಗರದಲ್ಲಿ. ವಂಚನೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ರಾಜೇಂದ್ರ ಕಳೆದ 20 ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರು ಹಾಸನದಲ್ಲಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ನಂತರ ತಮಿಳುನಾಡು ಪೊಲೀಸರು ಹಾಸನ ಜಿಲ್ಲಾ ಪೊಲೀಸ್ ವರಿಷ್ಠರ ನೆರವು ಕೋರಿ ಬುಧವಾರ ಬಂಧಿಸಿದರು.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎ ಐ ಎ ಡಿ ಎಮ್ ​ಕೆ ಆಡಳಿತದ ಸರ್ಕಾರದಲ್ಲಿ ಡೈರಿ ಅಭಿವೃದ್ಧಿ ಸಚಿವರಾಗಿದ್ದ ರಾಜೇಂದ್ರ ತಮ್ಮ ಬಂಧನದ ವಿರುದ್ಧ ಕೋರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಡಿಸೆಂಬರ್ 17ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ನಂತರ ತಲೆಮರೆಸಿಕೊಂಡಿದ್ದರು. ವಂಚನೆಯ ಎರಡು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ.

ರಾಜೇಂದ್ರ ಅವರ ಆಪ್ತರ ಫೋನ್ಗಳನ್ನು ಟ್ರ್ಯಾಕ್ ಮಾಡಿದಾಗ ಹಾಸನದಲ್ಲಿ ಬಚ್ಚಿಟ್ಟುಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ರಾಜೇಂದ್ರ ಅವರು ಸರ್ಕಾರಿ ನೌಕರಿಗಳನ್ನು ಕೊಡಿಸುವ ಆಮಿಷವೊಡ್ಡಿ ಬೇರೆ ಬೇರೆ ವ್ಯಕ್ತಿಗಳಿಗೆ ರೂ. 3 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ.

ಇದನ್ನೂ ಓದಿ:   ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್

Published on: Jan 06, 2022 12:07 AM