ಭಾರತದಲ್ಲಿ ಕೇವಲ ಎರಡೂವರೆ ವರ್ಷಗಳಲ್ಲಿ ಅವಧಿಯಲ್ಲಿ ಕಿಯಾ ಮೋಟಾರ್ಸ್ ಕಾರ್ಪೊರೇಶನ್ ಸಾಧಿಸಿರುವ ಪ್ರಗತಿ ಅಗಾಧವಾದದ್ದು!
ಅಂದಹಾಗೆ, ಕಳೆದ ವರ್ಷ ಕಿಯಾ ಮೋಟಾರ್ಸ್ ಕಾರ್ಪೊರೇಶನ್ ಭಾರತದಲ್ಲಿ 2.27 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಡೊಮೆಸ್ಟಿಕ್ ಮಾರ್ಕೆಟ್ ನಲ್ಲಿ 1.81 ಕಾರುಗಳು ಮಾರಾಟವಾಗಿದ್ದರೆ, 46,261 ಕಾರುಗಳನ್ನು ಬೇರೆ ದೇಶಗಳಿಗೆ ಮಾರಲಾಗಿದೆ.
ಕಿಯಾ ಮೋಟಾರ್ಸ್ ಕಾರ್ಪೊರೇಶನ್ ದಕ್ಷಿಣ ಕೊರಿಯ ಮೂಲದ ಆಟೊಮೊಬೈಲ್ ಕಂಪನಿಯಾಗಿದ್ದು ಎರಡು ವರ್ಷಗಳ ಹಿಂದೆ ಭಾರತದಲ್ಲಿ ಲಾಂಚ್ ಆಗಿ ಅತ್ಯಂತ ಕಡಿಮೆ ಅವಧಿಯಲ್ಲೇ ಇಲ್ಲಿನ ಟಾಪ್ 5 ಕಾರು ತಯಾರಿಕೆ ಕಂಪನಿಗಳಲ್ಲಿ ಒಂದೆನಿಸಿಕೊಳ್ಳುವಷ್ಟು ಪ್ರಗತಿ ಸಾಧಿಸಿದೆ. ಈ ಕಂಪನಿಯ ಜಾಗತಿಕ ಹೆಡ್ಕ್ವಾರ್ಟರ್ಸ್ ಸೋಲ್ನಲ್ಲಿವೆ. ಹುಂಡೈ ಮೋಟಾರ್ ಕಾರ್ಪೊರೇಶನ್, ಕಿಯಾ ಮೋಟಾರ್ಸ್ ಸಂಸ್ಥೆಯಲ್ಲಿ ಚಿಕ್ಕ ಪಾಲುದಾರಿಕೆಯನ್ನು ಹೊಂದಿದೆ. ಕಿಯಾ ತನ್ನ ಜನಪ್ರಿಯ ಬ್ರ್ಯಾಂಡ್ ಸೆಲ್ಟೋಸ್ ಮೂಲಕ ಭಾರತದಲ್ಲಿ ತನ್ನ ಯಾನ ಆರಂಭಿಸಿತು. ಭಾರತದ ರಸ್ತೆಗಳ ಮೇಲೆ ಸೆಲ್ಟೋಸ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಆಗಸ್ಟ್ 2019 ರಲ್ಲಿ. ಮಧ್ಯಮ ಗಾತ್ರದ ಎಸ್ ಯು ವಿ ಆಗಿರುವ ಸೆಲ್ಟೋಸ್ ಕಾರನ್ನು ಆಂಧ್ರ ಪ್ರದೇಶದ ಅನಂತಪುರನಲ್ಲಿರುವ ಘಟಕದಲ್ಲಿ ತಯಾರಿಸಲಾಗುತ್ತದೆ. ವರ್ಷವೊಂದಕ್ಕೆ ಮೂರು ಲಕ್ಷ ಯುನಿಟ್ಗಳನ್ನು ತಯಾರು ಮಾಡುವ ಸಾಮರ್ಥ್ಯವನ್ನು ಸದರಿ ಘಟಕ ಹೊಂದಿದೆ. ದೇಶಾದ್ಯಂತ ಹಬ್ಬಿರುವ 260 ಟಚ್-ಪಾಯಿಂಟ್ಗಳ ಮೂಲಕ ಕಿಯಾ ಸೆಲ್ಟೋಸ್ ಕಾರುಗಳನ್ನು ಮಾರಲಾಗುತ್ತದೆ.
ಕಿಯಾ ಸೆಲ್ಟೋಸ್ ಆರಂಭಿಕ ಬೆಲೆ ರೂ 9. 95 ಲಕ್ಷ ಆಗಿದೆ. ಸಂಸ್ಥೆಯ ಅತ್ಯಂತ ಅಗ್ಗದ ಮಾಡೆಲ್ ಆಗಿರುವ ಸಾನೆಟ್ ಬೆಲೆ ರೂ. 6.95 ಲಕ್ಷದಿಂದ ಅರಂಭಗೊಳ್ಳುತ್ತದೆ. ಹಾಗೆಯೇ, ಕಿಯಾ ಮೋಟಾರ್ಸ್ ಅತ್ಯಂತ ದುಬಾರಿ ಮಾಡೆಲ್ ಕಾರ್ನಿವಾಲ ಬೆಲೆ ರೂ. 25.15 ಲಕ್ಷದಿಂದ ಶುರುವಾಗುತ್ತದೆ.
ಅಂದಹಾಗೆ, ಕಳೆದ ವರ್ಷ ಕಿಯಾ ಮೋಟಾರ್ಸ್ ಕಾರ್ಪೊರೇಶನ್ ಭಾರತದಲ್ಲಿ 2.27 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಡೊಮೆಸ್ಟಿಕ್ ಮಾರ್ಕೆಟ್ ನಲ್ಲಿ 1.81 ಕಾರುಗಳು ಮಾರಾಟವಾಗಿದ್ದರೆ, 46,261 ಕಾರುಗಳನ್ನು ಬೇರೆ ದೇಶಗಳಿಗೆ ಮಾರಲಾಗಿದೆ. 2021 ರಲ್ಲಿ ಕಾರುಗಳ ಮಾರ್ಕೆಟ್ನಲ್ಲಿ ಕಿಯಾ ಮೋಟಾರ್ಸ್ ಕಾರ್ಪೊರೇಶನ್ ಪಾಲು ಶೇಕಡಾ 29ರಷ್ಟಿದೆ.
ಇದನ್ನೂ ಓದಿ: ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್