ಬುಲ್ಲಿ ಬಾಯ್ ಆ್ಯಪ್ ಲಾಂಚ್ ಮಾಡಿರುವ ಆರೋಪದಲ್ಲಿ ಯುವಕನೊಬ್ಬ ಮುಂಬೈ ಪೊಲೀಸರಿಗೆ ಸೆರೆ ಸಿಕ್ಕಿದ್ದು ಬೆಂಗಳೂರಲ್ಲಿ!
ವಿವಾದಾತ್ಮಕ ಮತ್ತು ಅತ್ಯಂತ ಕೀಳು ಅಭಿರುಚಿಯ ಬುಲ್ಲಿ ಬಾಯ್ ಌಪ್ ಅನ್ನು ದುಷ್ಟರು ಜನೆವರಿ 1ರಂದು ಲಾಂಚ್ ಮಾಡಿದ್ದು ಇದರಲ್ಲಿ ಮುಸ್ಲಿಂ ಮಹಿಳಾ ಪತ್ರಕರ್ತರು, ಸಮಾಜ ಸೇವಕಿಯರು, ವಿದ್ಯಾರ್ಥಿನಿಯರು ಮತ್ತು ಇತರ ಖ್ಯಾತನಾಮರ ಪೋಟೋಗಳನ್ನು ಅಸಹ್ಯಕರ ರೀತಿಯಲ್ಲಿ ಅಪ್ಲೋಡ್ ಮಾಡಿ ಅಶ್ಲೀಲ ಶೀರ್ಷಿಕೆಗಳನ್ನು ನೀಡಲಾಗಿದೆ.
ತಡವಾಗಿ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರದ ಸೈಬರ್ ಸೆಲ್ ಪೊಲೀಸರು ಸೋಮಾವಾರದಂದು ಬೆಂಗಳೂರಿನಲ್ಲಿ 21-ವರ್ಷ ವಯಸ್ಸಿನ ಇಂಜಿನೀಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಅರೋಪಿಯ ಬಗ್ಗೆ ಯಾವುದೇ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ವಿದ್ಯಾರ್ಥಿಯನ್ನು ಬಂಧಿಸಿದ ನಂತರ ಮಹಾರಾಷ್ಟ್ರ ಸರ್ಕಾರದ ಗೃಹ ರಾಜ್ಯ ಮಂತ್ರಿ (ನಗರ) ಸತೆಜ್ ಪಟೇಲ್ ಅವರು ಟ್ವೀಟೊಂದರಲ್ಲಿ, ಆರೋಪಿಯ ವಿವರಗಳನ್ನು ಬಹಿರಂಗಪಡಿಸಿದರೆ ಅದು ಈಗ ಜಾರಿಯಲ್ಲಿರುವ ತನಿಖೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.
Update on #BulliBai case:@MumbaiPolice has got a breakthrough.Though we cannot disclose the details at this moment as it may hamper the ongoing investigation, I would like to assure all the victims that we are proactively chasing the culprits & they will face the law very soon.
— Satej (Bunty) D. Patil (@satejp) January 3, 2022
ತಮ್ಮ ಟ್ವೀಟ್ ನಲ್ಲಿ ಪಟೇಲ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ದುರುಳರನ್ನು ಅದಷ್ಟು ಬೇಗ ಬಂಧಿಸಿ ಅವರಿಂದ ತೊಂದರೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಿದ್ದಾರೆ.
ವಿವಾದಾತ್ಮಕ ಮತ್ತು ಅತ್ಯಂತ ಕೀಳು ಅಭಿರುಚಿಯ ಬುಲ್ಲಿ ಬಾಯ್ ಆ್ಯಪ್ ಅನ್ನು ದುಷ್ಟರು ಜನೆವರಿ 1ರಂದು ಲಾಂಚ್ ಮಾಡಿದ್ದು ಇದರಲ್ಲಿ ಮುಸ್ಲಿಂ ಮಹಿಳಾ ಪತ್ರಕರ್ತರು, ಸಮಾಜ ಸೇವಕಿಯರು, ವಿದ್ಯಾರ್ಥಿನಿಯರು ಮತ್ತು ಇತರ ಖ್ಯಾತನಾಮರ ಪೋಟೋಗಳನ್ನು ಅಸಹ್ಯಕರ ರೀತಿಯಲ್ಲಿ ಅಪ್ಲೋಡ್ ಮಾಡಿ ಅಶ್ಲೀಲ ಶೀರ್ಷಿಕೆಗಳನ್ನು ನೀಡಲಾಗಿದೆ.
ಸದರಿ ಆ್ಯಪ್ನಲ್ಲಿ ಆಕ್ಷೇಪಾರ್ಹ ಕಂಟೆಂಟ್ ಬಗ್ಗೆ ಇರುವ ಬಗ್ಗೆ ದೂರುಗಳು ದಾಖಲಾದ ನಂತರ ಅದನ್ನು ಹೋಸ್ಟ್ ಮಾಡುತ್ತಿದ್ದ ಗಿಟ್ಹಬ್ ಪ್ಲಾಟ್ಫಾರ್ಮ್ ಬ್ಲಾಕ್ ಮಾಡಿತು. ಪ್ರಕರಣಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಗಳ ಅಡಿ ಅಪರಚಿತ ಅಪರಾಧಿಗಳ ವಿರುದ್ಧ ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್