‘ಹಳ್ಳಿ ಪವರ್’ಗೆ ಸುಸ್ತಾದ ಪ್ಯಾಟೆ ಹುಡ್ಗೀರು; ಏಳೇ ದಿನಕ್ಕೆ ನಾಲ್ವರು ಔಟ್
ಹಳ್ಳಿ ಪವರ್ ಶೋ ‘ಜೀ ಪವರ್’ ವಾಹಿನಿಯಲ್ಲಿ ಪ್ರಸಾರ ಕಾಣುತ್ತಾ ಇದೆ. ಈ ಶೋನಿಂದ ಒಟ್ಟು ನಾಲ್ವರು ಔಟ್ ಆಗಿದ್ದಾರೆ. ಈ ವಾರದ ಮಧ್ಯವೇ ಕೆಲವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಾ ಇವೆ.
‘ಹಳ್ಳಿ ಪವರ್’ ಶೋನಲ್ಲಿ ಕಳೆದ ವಾರಾಂತ್ಯದಲ್ಲಿ ಯುಕ್ತ ಎಲಿಮಿನೇಟ್ ಆದರು. ಈ ಮಧ್ಯೆ ಕಾವ್ಯಾ ಅವರು ಕಾಲಿಗೆ ಪೆಟ್ಟು ಮಾಡಿಕೊಂಡು ಹೊರ ಹೋದರು. ಈಗ ಶೋನಿಂದ ಮತ್ತಿಬ್ಬರು ಹೊರ ಹೋಗಿದ್ದಾರೆ. ಆ್ಯಶ್ ಮೆಲೋ ಸ್ಕೈಲರ್ ಹಾಗೂ ಮಂಗಳೂರಿನ ಸ್ನೇಹಾ ಶೆಟ್ಟಿ ವೈಯಕ್ತಿಕ ಕಾರಣ ನೀಡಿ ಹೊರಕ್ಕೆ ಬಂದಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 10, 2025 10:40 AM
Latest Videos

