ಗದಗ: ಕಾರಿನ ಮೇಲೆ ಪಾಕಿಸ್ತಾನ ಧ್ವಜ ಹಾಕಿ ಇನ್ಸ್ಟಾಗ್ರಾಂ ಪೋಸ್ಟ್, ಎಫ್ಐಆರ್ ಆದರೂ ಆರೋಪಿಯ ಬಂಧಿಸದ ಪೊಲೀಸರು
ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಶಿವಮೊಗ್ಗದ ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರ ಚರ್ಚೆಯಲ್ಲಿರುವಾಗಲೇ ಗದಗ ನಗರದಲ್ಲಿ ಕಾರಿನಲ್ಲಿ ಪಾಕಿಸ್ತಾನ ಧ್ವಜ ಹಾಕಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಘಟನೆ ವರದಿಯಾಗಿದೆ. ಘಟನೆ ಸಂಬಂಧ ಗದಗ ಶಹರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಯನ್ನು ಈವರೆಗೆ ಬಂಧಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಗದಗ, ಸೆಪ್ಟೆಂಬರ್ 10: ಗದಗ ನಗರದಲ್ಲಿ ಕಿಡಿಗೇಡಿಗಳು ಕಾರಿನ ಮೇಲೆ ಪಾಕಿಸ್ತಾನ ಧ್ವಜ ಹಾಕಿಕೊಂಡು ಓಡಾಡಿದ್ದಾರೆ. ಘಟನೆ ಸಂಬಂಧ ಸೆಪ್ಟೆಂಬರ್ 7ರಂದೇ ಗದಗ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಎಫ್ಐಆರ್ ದಾಖಲಾಗಿತ್ತು. ಆದರೂ ಆರೋಪಿಗಳನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಕಾರಿನ ಬೋನಟ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ತಹಶೀನ್ ಎಂಬಾತನ ಇನ್ಸ್ಟಾಗ್ರಾಂ ಐಡಿಯಿಂದ ಪೋಸ್ಟ್ ಮಾಡಲಾಗಿತ್ತು. ಸಮಾಜದ ಐಕ್ಯತೆಗೆ ಧಕ್ಕೆ, ಸೌಹಾರ್ಧತೆಗೆ ಬಾಧಕವಾಗುವ ಕೃತ್ಯ ಎಂದು ಪರಿಗಣಿಸಿ ಬಿಎನ್ಎಸ್ ಕಾಯ್ದೆಯ ಕಲಂ 299, 353(2), R/W 3/5 ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ದೇಶದ ಅನ್ನ ತಿಂದು ದ್ರೋಹ ಬಗೆಯುವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Latest Videos
