ಏರೋ ಇಂಡಿಯಾ ಶೋ ಬೆಂಗಳೂರು: ಇಂದಿನಿಂದ 4-ದಿನ ಕಾಲ ಆಗಸದಲ್ಲಿ ಘರ್ಜಿಸಲಿವೆ ದೇಶ ಮತ್ತು ವಿದೇಶಗಳ ವಿಮಾನಗಳು
ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಆಸೀನರಾಗಿದ್ದರು. ಏರ್ ಶೋ ವೀಕ್ಷಿಸಲು ಹೋಗಬಯಸುವವರು ನಗರ ಸಂಚಾರಿ ಪೊಲೀಸ್ ಜಾರಿಮಾಡಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ಪೊಲೀಸ್ ಎಲ್ಲ ವಿವರಗಳನ್ನು ಶೇರ್ ಮಾಡಿದೆ.
ಬೆಂಗಳೂರು: ಭಾರತದ ಅತಿದೊಡ್ಡ ಮತ್ತು ಬೆಂಗಳೂರು ನಗರದ ಐಕಾನಿಕ್ ಈವೆಂಟ್ ಅನಿಸಿಕೊಂಡಿರುವ ಏರ್ ಶೋ ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಆರಂಭಗೊಂಡಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಕ್ಕಿನ ಹಕ್ಕಿಗಳ ಪ್ರದರ್ಶನ, ಮಾರಾಟ ಮತ್ತು ಹಾರಾಟವನ್ನು ಉದ್ಧಾಟಿಸಿದರು. ಇಂದಿನಿಂದ ಗುರುವಾರದವರೆಗೆ ನಡೆಯಲಿರುವ ಏರ್ ಶೋನಲ್ಲಿ ಆತ್ಮನಿರ್ಭರ ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾದ ಹಲವಾರು ಯುದ್ಧವಿಮಾನಗಳ ಪ್ರದರ್ಶನ ನಡೆಯಲಿದೆ. ಬೇರೆ ಬೇರೆ ದೇಶಗಳ ವಿಮಾನ ತಯಾರಕ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿದ್ದು ಆಕಾಶದಲ್ಲಿ ವಿಮಾನಗಳ ಘರ್ಜನೆಯನ್ನು ಆಲಿಸಲು ಮತ್ತು ವೀಕ್ಷಿಸಲು ಭಾರತ ಮತ್ತು ವಿದೇಶಗಳಿಂದ ಅಗಮಿಸಿರುವ ಜನ ಕಾತುರರಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: RRa
Published on: Feb 10, 2025 11:23 AM