Video: ಮಹಾರಾಷ್ಟ್ರ ಪೊಲೀಸ್ ಪಡೆಗೆ ಸೇರ್ಪಡೆಯಾದ ಖುಷಿ, ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು
ಯಶಸ್ಸು ಯಾವಾಗಲೂ ಸಿಹಿಯಾಗಿರುತ್ತದೆ, ಆದರೆ ಈ ಯಶಸ್ಸನ್ನು ನಾವು ಪ್ರೀತಿಸುವವರೊಂದಿಗೆ ಹಂಚಿಕೊಂಡಾಗ ಅದು ಮರೆಯಲಾಗದ ನೆನಪಾಗುತ್ತದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಯುವತಿ ಸುಮೇಧಾ ಶೇಖ್ ಅವರು ಮಹಾರಾಷ್ಟ್ರ ಪೊಲೀಸ್ ಪಡೆಗೆ ಆಯ್ಕೆಯಾದ ನಂತರ ಆಚರಿಸಿದ ರೀತಿ ಈಗ ಇಡೀ ದೇಶದ ಗಮನ ಸೆಳೆದಿದೆ. ಅವರು ತನ್ನ ಯಶಸ್ಸಿಗೆ ಕಾರಣರಾದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುವ ಮೂಲಕ ಸಂಭ್ರಮಪಟ್ಟಿದ್ದಾರೆ.
ಬೀಡ್, ಏಪ್ರಿಲ್ 12: ಯಶಸ್ಸು ಯಾವಾಗಲೂ ಸಿಹಿಯಾಗಿರುತ್ತದೆ, ಆದರೆ ಈ ಯಶಸ್ಸನ್ನು ನಾವು ಪ್ರೀತಿಸುವವರೊಂದಿಗೆ ಹಂಚಿಕೊಂಡಾಗ ಅದು ಮರೆಯಲಾಗದ ನೆನಪಾಗುತ್ತದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಯುವತಿ ಸುಮೇಧಾ ಶೇಖ್ ಅವರು ಮಹಾರಾಷ್ಟ್ರ ಪೊಲೀಸ್ ಪಡೆಗೆ ಆಯ್ಕೆಯಾದ ನಂತರ ಆಚರಿಸಿದ ರೀತಿ ಈಗ ಇಡೀ ದೇಶದ ಗಮನ ಸೆಳೆದಿದೆ. ಅವರು ತನ್ನ ಯಶಸ್ಸಿಗೆ ಕಾರಣರಾದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುವ ಮೂಲಕ ಸಂಭ್ರಮಪಟ್ಟಿದ್ದಾರೆ.
ಇದು ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಬದಲಿಗೆ ತನ್ನನ್ನು ಬೆಳೆಸಲು ತಂದೆ ಅನುಭವಿಸಿದ ಕಷ್ಟಕ್ಕೆ ಮಗಳು ನೀಡಿದ ಅತ್ಯುನ್ನತ ಗೌರವವಾಗಿತ್ತು. ಮಹಾರಾಷ್ಟ್ರ ಪೊಲೀಸ್ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಕಠಿಣವಾದುದು. ಕೇವಲ ಲಿಖಿತ ಪರೀಕ್ಷೆಯಲ್ಲದೆ, ಕಠಿಣ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಮೌಲ್ಯಮಾಪನಗಳನ್ನು ಎದುರಿಸಬೇಕಾಗುತ್ತದೆ. ಸುಮೇಧಾ ಅವರ ಈ ದೈಹಿಕ ಸಾಮರ್ಥ್ಯ ಮತ್ತು ದೃಢಸಂಕಲ್ಪವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದು ಜನರು ಸಂತಸ ಪಟ್ಟಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

