Gaalipata 3: ‘ಗಾಳಿಪಟ 3’ ಮಾಡ್ತೀರಾ? ಉತ್ತರ ನೀಡಿ ಗಣೇಶ್ಗೆ ಸೆಲ್ಯೂಟ್ ಹೊಡೆದ ಯೋಗರಾಜ್ ಭಟ್
Gaalipata 2 Success Meet: ‘ಗಾಳಿಪಟ’ ಮತ್ತು ‘ಗಾಳಿಪಟ 2’ ಚಿತ್ರಗಳ ಯಶಸ್ಸಿನ ಬಳಿಕ ‘ಗಾಳಿಪಟ 3’ ಮಾಡಿ ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ. ಆ ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದಾರೆ.
ನಟ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅವರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಅವರ ನಟಿಸಿರುವ ‘ಗಾಳಿಪಟ 2’ (Gaalipata 2) ಸಿನಿಮಾ ಸೂಪರ್ ಹಿಟ್ ಆಗಿದೆ. ಅದೇ ಖುಷಿಯಲ್ಲಿ ಇಡೀ ಚಿತ್ರತಂಡ ಬುಧವಾರ (ಆಗಸ್ಟ್ 17) ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ವೇದಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿದ್ದಾರೆ. ‘ಗಾಳಿಪಟ’ ಮತ್ತು ‘ಗಾಳಿಪಟ 2’ ಚಿತ್ರಗಳ ಯಶಸ್ಸಿನ ಬಳಿಕ ‘ಗಾಳಿಪಟ 3’ ಮಾಡಿ ಎಂಬ ಒತ್ತಾಯ ಪ್ರೇಕ್ಷಕರಿಂದ ಕೇಳಿಬಂದಿದೆ. ಆ ರೀತಿ ಪ್ಲ್ಯಾನ್ ತಮಗೂ ಇದೆ ಎಂದು ಯೋಗರಾಜ್ ಭಟ್ (Yogaraj Bhat) ಹೇಳಿದ್ದಾರೆ. ಇಂಥ ಕಥೆಗಳಿಗೆ ಜೀವ ತುಂಬುವ ನಟ ಗಣೇಶ್ಗೆ ಅವರು ವೇದಿಕೆಯಿಂದಲೇ ಸೆಲ್ಯೂಟ್ ಮಾಡಿದ್ದಾರೆ. ಆ ಕ್ಷಣದ ವಿಡಿಯೋ ಇಲ್ಲಿದೆ..
Published on: Aug 18, 2022 09:31 AM