Women Kabaddi in Gadag: ಸೀರೆಯುಟ್ಟು ಕಬಡ್ಡಿ ಆಡಿದ ಮಹಿಳೆಯರು

| Updated By: ವಿವೇಕ ಬಿರಾದಾರ

Updated on: May 27, 2024 | 10:48 AM

ನರೇಗಾ ಯೋಜನೆ ಅಡಿ ಬದು ನಿರ್ಮಾಣ ಕಾರ್ಯಕ್ಕೆ ಬಂದ ಮಹಿಳೆಯರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕಬಡ್ಡಿ ಆಟ ಆಡಿ ಗಮನ ಸೆಳೆದರು. ಸದ್ಯ ಮಹಿಳೆಯರು ಕಬ್ಬಡ್ಡಿ ಆಡಿದ ವಿಡಿಯೋ ಎಲ್ಲಡೆ ವೈರಲ್​ ಆಗುತ್ತಿದೆ.

ನರೇಗಾ (Narega) ಯೋಜನೆ ಅಡಿ ಬದು ನಿರ್ಮಾಣ ಕಾರ್ಯಕ್ಕೆ ಬಂದ ಮಹಿಳೆಯರು ಕಬಡ್ಡಿ (Kabaddi) ಆಟ ಆಡಿ ಗಮನ ಸೆಳೆದರು. ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮ ಪಂಚಾಯತ ವತಿಯಿಂದ ಉದ್ಯೋಗಖಾತ್ರಿ ಕಾರ್ಮಿಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಿಡುವಿನ ಸಮಯದಲ್ಲಿ ಕಬಡ್ಡಿ
ಆಟ ಏರ್ಪಡಿಸಿದ್ದರು. ಕೂಲಿ ಕೆಲಸ ಮಾಡಿ ಸುಸ್ತಾಗಿದ್ದರಿಂದ ಕಾರ್ಮಿಕರ ಮನರಂಜನೆಗಾಗಿ ಗ್ರಾಮ ಪಂಚಾಯತ ಸಿಬ್ಬಂದಿ ಹೆಚ್ಚಿನ ಜನ ಉದ್ಯೋಗಖಾತ್ರಿ ಕೆಲಸಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಆಟ ಆಡಿಸಿ ಗಮನ ಸೆಳೆದರು..

Published on: May 25, 2024 09:29 AM