ಗದ್ದಿಗೌಡರ್ ಸೇರಿ ರಾಜ್ಯದ 25 ಬಿಜೆಪಿ ಸಂಸದರು ಒಮ್ಮೆಯಾದರೂ ಸಂಸತ್ತಿನಲ್ಲಿ ಬಾಯಿಬಿಟ್ರಾ? ಸಿದ್ದರಾಮಯ್ಯ
ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ, ನಿಮ್ಮ ಪ್ರತಿನಿಧಿಗಳೆನಿಸಿಕೊಳ್ಳಲು ಲಾಯಕ್ಕಿಲ್ಲದ ಜನ, ಇವರ ಪರ ಮತ ಚಲಾಯಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ಈ ಭಾಗದ ಜನರ ಧ್ವನಿಯಾಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ತನಗಿದೆ, ಹಾಗಾಗಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಅವರು ಹೇಳಿದರು.
ಬಾಗಲಕೋಟೆ: ಬನಹಟ್ಟಿಯಲ್ಲಿ ಅಯೋಜಿಸಲಾಗಿದ್ದ ಪ್ರಜಾಧ್ವನಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) 2019 ರಲ್ಲಿ ಕರ್ನಾಟಕದಿಂದ ಆಯ್ಕೆಯಾದ 25 ಸಂಸದರು (25 MPs) 5 ವರ್ಷಗಳಲ್ಲ್ಲಿ ಒಮ್ಮೆಯೂ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲಿಲ್ಲ ಎಂದರು. ಬಾಗಲಕೋಟೆಯ ಹಾಲಿ ಸಂಸದ ಪಿ ಸಿ ಗದ್ದಿಗೌಡರ್ (PC Gaddigoudar) ಅವರನ್ನು ವಿಶೇಷ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ರಾಜ್ಯಕ್ಕೆ 1.87 ಲಕ್ಷ ಕೋಟಿ ರೂ. ಅನ್ಯಾಯವಾದರೂ ಸಂಸತ್ತಿನಲ್ಲಿ ಚಕಾರವೆತ್ತದೆ ಸುಮ್ಮನೆ ಕೂತುಬಿಟ್ಟಿದ್ದರು ಎಂದು ಹೇಳಿದರು. ಕರ್ನಾಟಕ ಜನರ ಮತ್ತು ವಿಶೇಷವಾಗಿ ರೈತರ ಪರವಾಗಿ ಯಾವುದೇ ಕಾಳಜಿಯಿಲ್ಲದ ಗದ್ದಿಗೌಡರ್ ಮತ್ತು ಉಳಿದವರನ್ನು ಜನ ಯಾಕೆ ಆರಿಸಬೇಕು? ಇವರಿಂದ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ, ನಿಮ್ಮ ಪ್ರತಿನಿಧಿಗಳೆನಿಸಿಕೊಳ್ಳಲು ಲಾಯಕ್ಕಿಲ್ಲದ ಜನ, ಇವರ ಪರ ಮತ ಚಲಾಯಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ಈ ಭಾಗದ ಜನರ ಧ್ವನಿಯಾಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ತನಗಿದೆ, ಹಾಗಾಗಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಡರಾತ್ರಿ ಕರಗ ಉತ್ಸವ ವೀಕ್ಷಿಸಲು ಬಂದಾಗಲೂ ಮೋದಿ ಮೋದಿ ಘೋಷಣೆಗಳು!