ಗಾಂಧೀಜಿ ಅವರು ವಿಶ್ವ ನಾಯಕ ಮತ್ತು ಅವರ ಜೀವನವೇ ಒಂದು ಸಂದೇಶ; ಸಿಎಂ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2022 | 12:40 PM

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ(Mahatma Gandhi Punyathithi) ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ವಿಧಾನಸೌಧದಲ್ಲಿರುವ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

ಬೆಂಗಳೂರು: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ(Mahatma Gandhi Punyathithi) ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ವಿಧಾನಸೌಧದಲ್ಲಿರುವ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ನಂತರ ಗಾಂಧೀಜಿ ಪ್ರತಿಮೆಯ ಬಳಿ 2 ನಿಮಿಷ ಮೌನಾಚರಣೆ ಮಾಡಿದ್ದಾರೆ.  ಇನ್ನುಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಜನವರಿ 30 ಗಾಂಧೀಜಿ ಅವರ ಬಲಿದಾನ ದಿನ. ಮಹಾತ್ಮ ಗಾಂಧಿ ವಿಶ್ವದ ನಾಯಕರು. ಅಹಿಂಸೆ ಸಿದ್ದಾಂತದಲ್ಲಿ ಜೀವನ ನಡೆಸಿದವರು. ನನ್ನ ಜೀವನವೇ ಒಂದು ಸಂದೇಶ ಎಂದು ಹೇಳಿದ್ರು. ನಮಗೆ ಆದರ್ಶಪ್ರಿಯರಾಗಿದ್ದಾರೆ. ಅವರ ಬದುಕು, ವಿಚಾರ ನಮಗೆ ದಾರಿ ದೀಪವಾಗಿದೆ. ಭಾರತದ ಗಣತಂತ್ರ ಆಧಾರಸ್ತಂಭ. ಗಾಂಧಿಯವರ ಜೊತೆ ಸುಭಾಸ್ ಚಂದ್ರ್ ಬೋಸ್, ಭಗತ್ ಸಿಂಗ್ ಅವರು ಹುತಾತ್ಮರಾದ್ದಾರೆ ಎಂದರು. ಈ ವೇಳೆ ಸ್ಪೀಕರ್ ಕಾಗೇರಿ, ಸಚಿವ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ;

‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್​ ಗನ್​ಮ್ಯಾನ್​ ತೆರೆದಿಟ್ಟ ವಿವರಗಳು