ಸಾಯುವಾಗಲೂ ಹೇ ರಾಮ್ ಎಂದ ಗಾಂಧಿಯನ್ನು ಕೊಂದವರು ಸಹ ರಾಮಭಕ್ತರೆಂದು ಹೇಳಿಕೊಳ್ಳುತ್ತಿದ್ದಾರೆ: ಸಿದ್ದರಾಮಯ್ಯ

|

Updated on: Jan 30, 2024 | 2:58 PM

ಅಸಲಿಗೆ ರಾಮನ ಮೇಲೆ ನಮಗಿರುವಷ್ಟು ಭಕ್ತಿ ಅವರಿಗಿಲ್ಲ, ಶ್ರೀರಾಮ ಬಿಜೆಪಿಯವರ ಸೊತ್ತಲ್ಲ, ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠೆ ನಡೆದರೆ ಅದೇ ದಿನ ತಾನು ಬೆಂಗಳೂರಲ್ಲೊಂದು ರಾಮಮಂದಿರವನ್ನು ಉದ್ಘಾಟಿಸಿ ಅಲ್ಲಿ ನೆರೆದಿದ್ದ ಜನರಿಂದ ಜೈ ಶ್ರೀರಾಮ್ ಅನಿಸಿದ್ದಾಗಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಮಹಾತ್ಮಾ ಗಾಂಧಿಯವರ 76 ನೇ ಪುಣ್ಯಸ್ಮರಣೆ (Mahatma Gandhi 76th death anniversary) ದಿನವಾಗಿರುವ ಇಂದು ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಗಾಂಧೀಜಿಯವರು ಪಾಲಿಸಿದ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಅಸಮಾನತೆ ಮತ್ತು ಅಸ್ವೃಶ್ಯತೆಯನ್ನು (untouchability) ಹೋಗಲಾಡಿಸಲು ಒಟ್ಟಾಗಿ ಹೋರಾಡಿದರೆ ಅದು ಮಹಾತ್ಮನಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿಯಾಗಿದೆ ಎಂದು ಹೇಳಿದರು. ಗಾಂಧೀಜಿ ಸಾಯುವಾಗಲೂ ಹೇ ರಾಮ್ ಅನ್ನುತ್ತಾ ಪ್ರಾಣಬಿಟ್ಟರು, ಅವರು ಮತ್ತು ನಾವೆಲ್ಲ ಆರಾಧಿಸುವ ರಾಮನೇ ಬೇರೆ, ಬಿಜೆಪಿಯವರ ರಾಮನೇ ಬೇರೆ. ಸಾಯುವಾಗಲೂ ಹೇ ರಾಮ್ ಅಂದ ಗಾಂಧೀಜಿಯನ್ನು ಕೊಂದವರೂ ರಾಮನ ಜಪ ಮಾಡುತ್ತಿದ್ದಾರೆ, ಅವರು ಶ್ರೀರಾಮನನ್ನು ಕೇವಲ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಅಸಲಿಗೆ ರಾಮನ ಮೇಲೆ ನಮಗಿರುವಷ್ಟು ಭಕ್ತಿ ಅವರಿಗಿಲ್ಲ, ಶ್ರೀರಾಮ ಬಿಜೆಪಿಯವರ ಸೊತ್ತಲ್ಲ, ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠೆ ನಡೆದರೆ ಅದೇ ದಿನ ತಾನು ಬೆಂಗಳೂರಲ್ಲೊಂದು ರಾಮಮಂದಿರವನ್ನು ಉದ್ಘಾಟಿಸಿ ಅಲ್ಲಿ ನೆರೆದಿದ್ದ ಜನರಿಂದ ಜೈ ಶ್ರೀರಾಮ್ ಅನಿಸಿದ್ದಾಗಿ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ