ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಟಫ್​​ ರೂಲ್ಸ್​​: ಈ ನಿಯಮಗಳನ್ನ ಪಾಲಿಸದಿದ್ರೆ ಕ್ರಮ ಫಿಕ್ಸ್​​ ಎಂದ ನಗರ ಪೊಲೀಸ್ ಆಯುಕ್ತ

Edited By:

Updated on: Sep 06, 2026 | 9:16 AM

ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸರು ಕಠಿಣ ಮಾರ್ಗಸೂಚಿ ಜಾರಿಗೊಳಿಸಿದ್ದು, ಜಿಬಿಎ ಅನುಮತಿ, ನಿಗದಿತ ಮೆರವಣಿಗೆ ಮಾರ್ಗ ಹಾಗೂ ಸ್ವಯಂಸೇವಕರ ಪಟ್ಟಿ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಮೆರವಣಿಗೆ ಮಾರ್ಗ ಮತ್ತು ಗಣೇಶ ವಿಸರ್ಜನೆ ಸ್ಥಳಗಳಲ್ಲಿ ಜಿಬಿಎ ಹಾಗೂ ಸ್ಥಳೀಯ ಆಯಾ ಡಿಸಿಪಿಗಳಿಂದ ಪರಿಶೀಲನೆ ನಡೆಯಲಿದೆ. ನಿಯಾಮವಳಿ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​​ 06: ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಪೊಲೀಸರು ಕಠಿಣ ರೂಲ್ಸ್​ ಜಾರಿಗೆ ತಂದಿದ್ದು, ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಗಣೇಶೋತ್ಸವ ಆಚರಣೆಯ ಜವಾಬ್ದಾರಿ ಆಯೋಜಕರದ್ದಾಗಿದ್ದು, ಪೊಲೀಸರು ಮತ್ತು ಜಿಬಿಎ ನಿಯಾಮವಳಿ ಮೀರದಂತೆ ಸೂಚನೆ ನೀಡಲಾಗಿದೆ. ಗಣೇಶೋತ್ಸವಕ್ಕೆ ಬೇರೆ ಇಲಾಖೆಗಳ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆದಿದ್ದರೆ ಮಾತ್ರ ಗಣೇಶ ಕೂರಿಸಲು ಅವಕಾಶ ಇರಲಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್ ಆದೇಶಗಳನ್ನ ಉಲ್ಲಂಘಿಸುವಂತಿಲ್ಲ. ಟೈಮಿಂಗ್ಸ್ ಪ್ರಕಾರ ನಿಗದಿಪಡಿಸಿದ ರೂಟ್​ನಲ್ಲೇ ಮೆರವಣಿಗೆ ನಡೆಯಬೇಕು. ವಿಶೇಷವಾಗಿ ಸ್ವಯಂಸೇವಕರ ಪಟ್ಟಿ ಪೊಲೀಸರಿಗೆ ಕೊಡ್ಬೇಕು. ಮೆರವಣಿಗೆ ಮಾರ್ಗ ಮತ್ತು ಗಣೇಶ ವಿಸರ್ಜನೆ ಸ್ಥಳಗಳಲ್ಲಿ ಜಿಬಿಎ ಹಾಗೂ ಸ್ಥಳೀಯ ಆಯಾ ಡಿಸಿಪಿಗಳಿಂದ ಪರಿಶೀಲನೆ ನಡೆಯಲಿದೆ. ನಿಯಾಮವಳಿ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More