ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ತೆಕ್ಕೆಗೆ ಎಳೆದುಕೊಂಡ ಅದಾನಿ ಗ್ರೂಪ್

| Updated By: preethi shettigar

Updated on: Oct 15, 2021 | 8:30 AM

ಕಳೆದೆರಡು ತಿಂಗಳುಗಳಿಂದ ಆದಾನಿ ಸಂಸ್ಥೆಯ ಅಧಿಕಾರಿಗಳು ಜೈಪುರ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಹಾಗೆ ನೋಡಿದರೆ ಆರು ತಿಂಗಳ ಹಿಂದೆಯೇ, ಅದಾನಿ ಈ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕಿತ್ತು.

ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಸೋಮವಾರದಿಂದ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು ನಿರ್ವಹಣೆಯ (ಎಎಐ) ಉಸ್ತವಾರಿಯನ್ನು ಅದಾನಿ ಗ್ರೂಪ್ ಗೆ ವರ್ಗಾಯಿಸಿತು. ಭಾರತದ ಸರ್ಕಾರವು ಈ ವಿಮಾನ ನಿಲ್ದಾಣವನ್ನು 50 ವರ್ಷಗಳ ಅವಧಿಗೆ ಗೌತಮ್ ಅದಾನಿಗೆ ಭೋಗ್ಯಕ್ಕೆ ನೀಡಿದೆ. ಎಎಐ ನಿರ್ದೇಶಕ ಜೆ ಎಸ್ ಬಿಂದ್ರಾ ಆವರು ಸಾಂಕೇತಿಕವಾಗಿ, ವಿಮಾನ ನಿಲ್ದಾಣದ ಕೀಲಿ ಕೈಯನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಅದಾನಿ ಜೈಪುರ ಇಂಟರ್​ನ್ಯಾಶನಲ್ ಲಿಮಿಟೆಡ್​​ನ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ವಿಷ್ಣು ಝಾ ಅವರಿಗೆ ಹಸ್ತಾಂತರಿಸಿದರು. ಕಂಪನಿಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಆಧಾರದಲ್ಲಿ ನಿಲ್ದಾಣದ ಕಾರ್ಯ ಚಟುವಟಿಕೆ, ನಿರ್ವಹಣೆ, ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ವಿಷ್ಣು ಝಾ ಹೇಳಿದರು.

ಕಳೆದೆರಡು ತಿಂಗಳುಗಳಿಂದ ಆದಾನಿ ಸಂಸ್ಥೆಯ ಅಧಿಕಾರಿಗಳು ಜೈಪುರ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಹಾಗೆ ನೋಡಿದರೆ ಆರು ತಿಂಗಳ ಹಿಂದೆಯೇ, ಅದಾನಿ ಈ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ, ಕೊವಿಡ್-19 ಪಿಡುಗಿನಿಂದಾಗಿ ಡಿಸೆಂಬರ್ 2021 ರವರೆಗೆ ಪ್ರಕ್ರಿಯೆಯನ್ನು ಮುಂದೂಡಿತ್ತು.

ಆದರೆ, ಸರ್ಕಾರವು ಮೂರು ತಿಂಗಳೊಳಗೆ ಉಸ್ತುವಾರಿಯನ್ನು ವಹಿಸಿಕೊಳ್ಳಲು ಗಡುವು ನೀಡಿದ್ದರಿಂದ ಸೋಮವಾರ ಆ ಪ್ರಕ್ರಿಯೆ ಪೂರ್ಣಗೊಂಡಿದೆ.
ಪ್ರತಿದಿನದ ಶೆಡ್ಯೂಲ್ಡ್ ಫ್ಲೈಟ್ ಆಪರೇಶನ್​ಗಳ ಆಧಾರದಲ್ಲಿ ನೋಡಿದ್ದೇಯಾದರೆ, ಜೈಪುರ ವಿಮಾನ ನಿಲ್ದಾಣವು ಭಾರತದ 11 ನೇ ಅತಿ ಕಾರ್ಯಶೀಲ ನಿಲ್ದಾಣವಾಗಿದೆ.

ಸಂಗಾನೇರ್ ದಕ್ಷಿಣ ಪ್ರಾಂತ್ಯದ ಉಪನಗರನಲ್ಲ್ಲಿರುವ ಸದರಿ ವಿಮಾನ ನಿಲ್ದಾಣಕ್ಕೆ 29 ಡಿಸೆಂಬರ್ 2005 ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಟೇಟಸ್ ಸಿಕ್ಕಿತು. ನಿಲ್ದಾಣದ ವಿಸ್ತೀರ್ಣವು 14 ವಿಮಾನಗಳು ಒಟ್ಟಿಗೆ ನಿಲ್ಲುವಷ್ಟು ವಿಶಾಲವಾಗಿದ್ದು ಹೊಸ ಟರ್ಮಿನಲ್ ಕಟ್ಟಡವು ಏಕಕಾಲಕ್ಕೆ 1,000 ಪ್ರಯಾಣಿಕರನ್ನು ನಿರ್ವಹಿಸುವಷ್ಟು ವಿಸ್ತಾರವಾಗಿದೆ.

ಇದನ್ನೂ ಓದಿ: ‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ