ಸಕ್ರೇಬೈಲಿನಲ್ಲಿ ಶಿವಣ್ಣ, ಗೀತಾ: ಚುನಾವಣೆಯ ಅಬ್ಬರದ ಪ್ರಚಾರದ ನಡುವೆ ರಿಲ್ಯಾಕ್ಸ್
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್ಕುಮಾರ್ ಅವರು ಸಕ್ರೇಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದಾರೆ. ಆನೆ ಸವಾರಿ ಮತ್ತು ತುಂಗಾ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್ ಮಾಡಿ ಅವರು ಖುಷಿಪಟ್ಟಿದ್ದಾರೆ. ಬಿರುಸಿನ ಪ್ರಚಾರದ ನಡುವೆ ಅವರು ರಿಲ್ಯಾಕ್ಸ್ ಮೂಡ್ನಲ್ಲಿ ಸ್ವಲ್ಪ ಸಮಯ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ..
ನಟ ಶಿವರಾಜ್ಕುಮಾರ್ (Shivarajkumar) ಅವರು ಪತ್ನಿ ಗೀತಾ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಲವು ಊರುಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ಬಿರು ಬಿಸಿಲಿನ ನಡುವೆಯೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇಂದು (ಏಪ್ರಿಲ್ 11) ಅವರು ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರಕ್ಕೆ ತೆರಳಿದ್ದಾರೆ. ಪತ್ನಿ ಗೀತಾ ಜೊತೆ ಆನೆ ಸವಾರಿ ಮಾಡಿದ್ದಾರೆ. ನೆರೆದಿದ್ದ ಪ್ರವಾಸಿಗರ ಜೊತೆ ಅವರು ಕಾಲ ಕಳೆದಿದ್ದಾರೆ. ಅವರಿಗೆ ಮಧು ಬಂಗಾರಪ್ಪ ಸಾಥ್ ನೀಡಿದರು. ಇದೇ ವೇಳೆ ಶಿವಣ್ಣ ಮತ್ತು ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ಬೋಟಿಂಗ್ ಮಾಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕಾಂಗ್ರೆಸ್ (Comgress) ಅಭ್ಯರ್ಥಿಯಾಗಿ ಗೀತಾ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸದ್ಯಕ್ಕೆ ಶಿವರಾಜ್ಕುಮಾರ್ ಅವರು ಸಿನಿಮಾದ ಕೆಲಸಗಳಿಂದ ಬ್ರೇಕ್ ಪಡೆದು ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.