‘ಬ್ಲೌಸ್ ಬಗ್ಗೆ ಸಿನಿಮಾ ಅಂದ್ರೆ ಅಸಹ್ಯ ಅಲ್ಲ’; ‘ರವಿಕೆ ಪ್ರಸಂಗ’ ಚಿತ್ರದ ಬಗ್ಗೆ ಗೀತಾ ಭಾರತಿ ಭಟ್ ಮಾತು
‘ರವಿಕೆ ಪ್ರಸಂಗ’ ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ರಿಲೀಸ್ ಮಾಡಲಾಗಿದೆ. ಆ ವೇಳೆ ಚಿತ್ರದ ನಟಿ ಗೀತಾ ಭಾರತಿ ಭಟ್ ಅವರು ತಮ್ಮ ಮಾತುಗಳನ್ನು ಹಂಚಿಕೊಂಡರು. ಈ ಸಿನಿಮಾದಲ್ಲಿ ರವಿಕೆಯ ಕುರಿತಾದ ಕಥೆ ಇದೆ. ಅದರ ವಿಶೇಷತೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
‘ರವಿಕೆ ಪ್ರಸಂಗ’ (Ravike Prasanga) ಚಿತ್ರದಲ್ಲಿ ನಟಿ ಗೀತಾ ಭಾರತಿ ಭಟ್, ಸಂಪತ್ ಮೈತ್ರೇಯ ಮುಂತಾದವರು ಅಭಿನಯಿಸಿದ್ದಾರೆ. ಮಹಿಳೆಯರು ಧರಿಸುವ ಬ್ಲೌಸ್ ಕುರಿತಾಗಿಯೇ ಈ ಸಿನಿಮಾದ ಕಥೆ ಇದೆ. ಹಾಗೆಂದ ಮಾತ್ರಕ್ಕೆ ಈ ಚಿತ್ರ ಅಸಹ್ಯವಾಗಿಲ್ಲ ಎಂದು ಗೀತಾ ಭಾರತಿ ಭಟ್ (Geetha Bharathi Bhat) ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಆಯಿತು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿ ನಾನು ಸಿನಿಮಾಗಾಗಿ ಡ್ಯಾನ್ಸ್ ಮಾಡಿದ್ದೇನೆ. ರವಿಕೆ ಕುರಿತು ವಿಭಿನ್ನವಾಗಿ ಸಿನಿಮಾ ಮಾಡಲಾಗಿದೆ. ಇದು ಒಂದು ಸೂಕ್ಷ್ಮವಾದ ವಿಚಾರ. ಅದನ್ನು ಎಲ್ಲಿಯೂ ಅಸಹ್ಯ ಎನಿಸಿದ ರೀತಿಯಲ್ಲಿ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಸಂತೋಷ್ ಕೊಡೆಂಕೆರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos