ರೈಲು ಬೋಗಿಗಳಲ್ಲಿ ಇಲಿಗಳ ಕಾಟ; ಬ್ಯಾಗ್, ಚೀಲ ಕಚ್ಚುತ್ತಿವೆ ಎಂದು ಪ್ರಯಾಣಿಕರ ಅಳಲು

ರೈಲು ಬೋಗಿಗಳಲ್ಲಿ ಇಲಿಗಳ ಕಾಟ; ಬ್ಯಾಗ್, ಚೀಲ ಕಚ್ಚುತ್ತಿವೆ ಎಂದು ಪ್ರಯಾಣಿಕರ ಅಳಲು

ಅಶೋಕ ಯಡಳ್ಳಿ, ವಿಜಯಪುರ
| Updated By: ಆಯೇಷಾ ಬಾನು

Updated on: Sep 16, 2023 | 9:39 AM

ಜನರಲ್ ಬೋಗಿಗಳಲ್ಲಿ ಇಲಿಗಳು ಬಿಂದಾಸ್ ಆಗಿ ಓಡಾಡುತ್ತಿವೆ. ಹೈದರಾಬಾದ್ - ವಿಜಯಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಇಲಿಗಳ ಓಡಾಟ ಹೆಚ್ಚಿದ್ದು ಯಾರ ಭಯವೂ ಇಲ್ಲದೆ ಕಾಲು ಕಾಲಿಗೆ ಸಿಕ್ಕಿ ತಪ್ಪಿಸಿಕೊಂಡು ಓಡಾಡುತ್ತಿವೆ. ರೈಲಿನಲ್ಲಿನ ಪ್ರಯಾಣಿಕರ ನಿದ್ದೆ ಕೆಡಿಸುತ್ತಿವೆ. ಪ್ರಯಾಣಿಕರ ಬ್ಯಾಗ್ ಹಾಗೂ ಇತರೇ ವಸ್ತುಗಳು ಸೇರಿದಂತೆ ಚೀಲಗಳನ್ನು ಕಚ್ಚಿ ಹಾಕುತ್ತಿವೆ.

ವಿಜಯಪುರ, ಸೆ.16: ರೈಲುಗಳಲ್ಲಿ ಶೌಚಾಲಯ ಶುಚಿಗೊಳಿಸದೆ ದುರ್ನಾಥ, ಸೊಳ್ಳೆ, ಜಿರಳೆ, ಇಲಿ ಕಾಟ ಸಾಮಾನ್ಯ. ಜೊತೆಗೆ ಇವುಗಳ ಬಗ್ಗೆ ರೈಲ್ವೆ ಇಲಾಖೆಗಳಿಗೆ ದೂರು ನೀಡಿ ಪರಿಹಾರ ಪಡೆದುಕೊಂಡ ಪ್ರಯಾಣಿಕರೂ ಇದ್ದಾರೆ. ಸದ್ಯ ಹೈದರಾಬಾದ್ – ವಿಜಯಪುರ ಎಕ್ಸ್ಪ್ರೆಸ್ ರೈಲಿನ ಬೋಗಿಗಳಲ್ಲಿ ಇಲಿ ಕಾಟ ಹೆಚ್ಚಾಗಿದ್ದು ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಬೋಗಿಗಳನ್ನು ಸರಿಯಾಗಿ ಸ್ವಚ್ಚಗೊಳಿಸದ ಸಿಬ್ಬಂದಿ ಮೇಲೆ ಕಿಡಿಕಾರಿದ್ದಾರೆ.

ಜನರಲ್ ಬೋಗಿಗಳಲ್ಲಿ ಇಲಿಗಳು ಬಿಂದಾಸ್ ಆಗಿ ಓಡಾಡುತ್ತಿವೆ. ಹೈದರಾಬಾದ್ – ವಿಜಯಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಇಲಿಗಳ ಓಡಾಟ ಹೆಚ್ಚಿದ್ದು ಯಾರ ಭಯವೂ ಇಲ್ಲದೆ ಕಾಲು ಕಾಲಿಗೆ ಸಿಕ್ಕಿ ತಪ್ಪಿಸಿಕೊಂಡು ಓಡಾಡುತ್ತಿವೆ. ರೈಲಿನಲ್ಲಿನ ಪ್ರಯಾಣಿಕರ ನಿದ್ದೆ ಕೆಡಿಸುತ್ತಿವೆ. ಪ್ರಯಾಣಿಕರ ಬ್ಯಾಗ್ ಹಾಗೂ ಇತರೇ ವಸ್ತುಗಳು ಸೇರಿದಂತೆ ಚೀಲಗಳನ್ನು ಕಚ್ಚಿ ಹಾಕುತ್ತಿವೆ. ದಿನ ನಿತ್ಯ ರೈಲಿನಲ್ಲಿ ಇಲಿಗಳ ಕಾಟಕ್ಕೆ ಬೇಸತ್ತ ರೈಲು ಪ್ರಯಾಣಿಕರು ಇಲಿಗಳ ಕಾಟ ತಪ್ಪಿಸಿ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ರೈಲ್ವೆ ಇಲಾಖೆಗೆ ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ