ಪ್ರಚಾರದ ನಡುವೆ ಯುಗಾದಿ; ಅಭಿಮಾನಿ ಮನೆಯಲ್ಲಿ ಶಿವಣ್ಣ-ಗೀತಾ ಹೋಳಿಗೆ ಊಟ

|

Updated on: Apr 09, 2024 | 5:30 PM

ಗೀತಾ ಹಾಗೂ ಶಿವರಾಜ್​ಕುಮಾರ್​ ಅವರು ಈಗ ಶಿವಮೊಗ್ಗದಲ್ಲಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅವರು ನಿರತರಾಗಿದ್ದಾರೆ. ಈ ನಡುವೆ ಯುಗಾದಿ ಹಬ್ಬ ಬಂದಿದ್ದು, ಅಭಿಮಾನಿಗಳ ಮನೆಯಲ್ಲಿ ಶಿವಣ್ಣ ಮತ್ತು ಗೀತಾ ಹೋಳಿಗೆ ಊಟ ಸವಿದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ ಕುಮಾರ್​ ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ಶಿವರಾಜ್​ಕುಮಾರ್​ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಅವರು ಪ್ರವಾಸ ಕೈಗೊಂಡಿದ್ದಾರೆ. ಮನೆಮನೆಗೂ ತೆರಳಿ ಮತ ಕೇಳುತ್ತಿದ್ದಾರೆ. ಇದರ ನಡುವೆಯೇ ಯುಗಾದಿ ಹಬ್ಬ (Ugadi 2024) ಬಂದಿದೆ. ಈಗ ಗೀತಾ ಮತ್ತು ಶಿವರಾಜ್​ಕುಮಾರ್​ ಅವರು ಶಿವಮೊಗ್ಗದಲ್ಲಿದ್ದಾರೆ. ಅಭಿಮಾನಿಗಳ ಮನೆಯಲ್ಲಿ ಅವರು ಹಬ್ಬದ ಊಟ ಸವಿದಿದ್ದಾರೆ. ಹೋಳಿಗೆ ಊಟ ಮಾಡಿದ ವಿಡಿಯೋ ಇಲ್ಲಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಈ ಮೊದಲು ಕೂಡ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ಪರವಾಗಿ ಚಿತ್ರರಂಗದ ಅನೇಕರು ಬೆಂಬಲ ಸೂಚಿಸಿದ್ದಾರೆ. ಶಿವರಾಜ್​ಕುಮಾರ್​ (Shivarajkumar) ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಗೆ ಸಣ್ಣ ಬ್ರೇಕ್​ ನೀಡಿದ್ದಾರೆ. ಪತ್ನಿಯ ಪರವಾಗಿ ಅವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈಗ ಚೇತರಿಸಿಕೊಂಡು ಮತ್ತೆ ಆ್ಯಕ್ಟೀವ್​ ಆಗಿ ಪ್ರಚಾರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.