Video: ಇದೇನಿದು ವಿಚಿತ್ರ, ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ, ನಡೆದಿದ್ದೇನು?
ಇದೇನಿದು ವಿಚಿತ್ರ, ಸಾಮಾನ್ಯವಾಗಿ ಯಾವುದೇ ಹುಡುಗಿಗೆ ಪ್ರೇಮ ನಿವೇದನೆ ಮಾಡುವಾಗ ಹುಡುಗರು ಉಂಗುರವನ್ನು ಹಿಡಿದು ಹೋಗುವುದನ್ನು ಕಂಡಿದ್ದೇವೆ. ಆದರೆ ಆತ ಸಿಂಧೂರ ಹಿಡಿದುಹೋಗಿದ್ದ. ಉತ್ತರ ಪ್ರದೇಶದ ಗಾಜಿಯಾಬಾದಿನಲ್ಲಿರುವ ಮಾಲ್ನಲ್ಲಿ ಯುವಕ ಯುವತಿಯ ಎದುರು ಮಂಡಿಯೂರಿ ಕುಳಿತೇ ಬಿಟ್ಟ, ಆಕೆಯೂ ಪ್ರೀತಿಗೆ ಓಕೆ ಎಂದು ಉಂಗುರ ತೊಡಿಸುತ್ತಾನೆ ಎಂದು ಕೈ ಮುಂದೆ ಮಾಡಿದರೆ. ಆದರೆ ಸಿಂಧೂರವನ್ನು ಹಚ್ಚಿ ತಾಳಿ ಕಟ್ಟಿಯೇ ಬಿಟ್ಟ.
ಗಾಜಿಯಾಬಾದ್, ಡಿಸೆಂಬರ್ 22: ಇದೇನಿದು ವಿಚಿತ್ರ, ಸಾಮಾನ್ಯವಾಗಿ ಯಾವುದೇ ಹುಡುಗಿಗೆ ಪ್ರೇಮ ನಿವೇದನೆ ಮಾಡುವಾಗ ಹುಡುಗರು ಉಂಗುರವನ್ನು ಹಿಡಿದು ಹೋಗುವುದನ್ನು ಕಂಡಿದ್ದೇವೆ. ಆದರೆ ಆತ ಸಿಂಧೂರ ಹಿಡಿದುಹೋಗಿದ್ದ. ಉತ್ತರ ಪ್ರದೇಶದ ಗಾಜಿಯಾಬಾದಿನಲ್ಲಿರುವ ಮಾಲ್ನಲ್ಲಿ ಯುವಕ ಯುವತಿಯ ಎದುರು ಮಂಡಿಯೂರಿ ಕುಳಿತೇ ಬಿಟ್ಟ, ಆಕೆಯೂ ಪ್ರೀತಿಗೆ ಓಕೆ ಎಂದು ಉಂಗುರ ತೊಡಿಸುತ್ತಾನೆ ಎಂದು ಕೈ ಮುಂದೆ ಮಾಡಿದರೆ. ಆದರೆ ಸಿಂಧೂರವನ್ನು ಹಚ್ಚಿ ತಾಳಿ ಕಟ್ಟಿಯೇ ಬಿಟ್ಟ. ಆಕೆ ನೋಡ ನೋಡುತ್ತಿದ್ದಂತೆ ಮದುವೆಯೇ ನಡೆದುಹೋಗಿದೆ. ಆಕೆಗೆ ಇದು ಕನಸಾ ಅಥವಾ ನನಸೋ ಎಂಬ ವಾಸ್ತವಕ್ಕೆ ಬರುವ ಮುನ್ನವೇ ಎಲ್ಲ ನಡೆದು ಹೋಗಿತ್ತು.ಪಕ್ಕದಲ್ಲಿ ನಿಂತಿದ್ದ ಹಲವಾರು ಜನರು ತಮ್ಮ ಫೋನ್‌ಗಳಲ್ಲಿ ಈ ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಸಿಂಧೂರವನ್ನು ಹಚ್ಚಿದ ನಂತರ, ಇಬ್ಬರೂ ಪರಸ್ಪರ ಅಪ್ಪಿಕೊಳ್ಳುತ್ತಾರೆ, ಜನರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

