ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ? ಸ್ಪಷ್ಟನೆ ಕೊಟ್ಟ ಚೈತ್ರಾ
ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳಾಗಿದ್ದ ಚೈತ್ರಾ ಹಾಗೂ ರಜತ್ ಅವರು ಬಿಗ್ ಬಾಸ್ ಮನೆಗೆ ತೆರಳೋ ಅವಕಾಶ ಪಡೆದರು. ಮೊದಲು ಅತಿಥಿಗಳಾಗಿದ್ದ ಅವರು ನಂತರ ಅವರು ಸ್ಪರ್ಧಿಗಳಾದರು. ಅವರು ದೊಡ್ಮನೆಗೆ ಹೋಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅವರ ಉತ್ತರ ಬಹುತೇಕರಿಗೆ ನಿಜ ಎನಿಸಿದೆ.
ಬಿಗ್ ಬಾಸ್ ಮನೆಗೆ ಒಟ್ಟಿಗೆ ತೆರಳಿದ್ದ ರಜತ್ ಹಾಗೂ ಚೈತ್ರಾ ಒಟ್ಟಿಗೆ ಎಲಿಮಿನೇಟ್ ಆದರು. ಅಶ್ವಿನಿಗೆ ಠಕ್ಕರ್ ಕೊಡೋಕೆ ಚೈತ್ರಾ, ಗಿಲ್ಲಿಗೆ ಠಕ್ಕರ್ ಕೊಡೋಕೆ ರಜತ್ ಹೋಗಿದ್ದರು ಎಂಬ ಮಾತಿತ್ತು. ಈ ಮಾತನ್ನು ಚೈತ್ರಾ ಅವರು ಅಲ್ಲಗಳೆದಿದ್ದಾರೆ. ‘ಆ ರೀತಿ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇವರು ಹೊರಗಿನಿಂದ ಆಟ ನೋಡಿಕೊಂಡು ಹೋಗಿರುತ್ತಾರೆ. ಯಾವುದಾದರೂ ಸ್ಪರ್ಧಿಗಳಿಗೆ ಏನಾದರೂ ಬದಲಾವಣೆ ಬೇಕು ಎಂದಾಗ ಅದನ್ನು ಮಾಡುವ ಕೆಲಸವನ್ನು ಇವರು ಮಾಡಿದ್ದಾರಂತೆ.

