ಗಿಲ್ಲಿ-ರಘು ಗೆಳೆತನದಲ್ಲಿ ಬಿರುಕು; ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯ್ತು

Updated on: Dec 01, 2025 | 8:23 AM

ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್. ವೈರಿಗಳ ಮಧ್ಯೆ ಕಿತ್ತಾಟ ನಡೆದರೆ ಅದು ಒಂದು ಲೆಕ್ಕ. ಆದರೆ, ಆಪ್ತರು ಎನಿಸಿಕೊಂಡವರ ಮಧ್ಯೆಯೇ ಕಿರಿಕ್ ಆಗಿಬಿಟ್ಟರೆ? ಈ ರೀತಿಯ ಘಟನೆ ನಡೆದಿದೆ. ರಘು ಹಾಗೂ ಗಿಲ್ಲಿ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಇಡೀ ಮನೆ ಸಾಕ್ಷಿ ಆಗಿದೆ. ಇವರನ್ನು ತಪ್ಪಿಸಲು ಎಲ್ಲರೂ ಬರಬೇಕಾದ ಪರಿಸ್ಥಿತಿ ಬಂತು.

ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಗಿಲ್ಲಿ ಮಾಡೋ ಕೀಟಲೆಗಳನ್ನು ರಘು ಸಹಿಸಿಕೊಂಡಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಗಿಲ್ಲಿ ಬಟ್ಟೆಯನ್ನು ರಘು ಎಸೆದಿದ್ದರು. ಈ ವಾರ ರ‍್ಯಾಂಕಿಂಗ್ ವಿಷಯದಲ್ಲಿ ಗಿಲ್ಲಿ ಹಾಗೂ ರಘು ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಮನೆಗೆಲಸ ಮಾಡೋದಿಲ್ಲ ಎಂದು ರಘು ದೂರಿದ್ದಾರೆ. ಈ ವಿಷಯ ಕಿತ್ತಾಟಕ್ಕೆ ಎಡೆಮಾಡಿಕೊಟ್ಟಿದೆ. ಈ ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 01, 2025 08:22 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More