ಸಾಂಗ್ ಆಗಿ ಬದಲಾಯ್ತು ಗಿಲ್ಲಿ ಹೇಳಿದ್ದ ‘ದೊಡ್ಡವ್ವ ದೋಸೆ ಕೊಡು’ ಡೈಲಾಗ್; ನೀವು ಕೇಳಿ

Updated on: Oct 27, 2025 | 10:58 AM

‘ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು..’ ಎಂದು ಗಿಲ್ಲಿ ಡೈಲಾಗ್ ಹೇಳಿದ್ದರು. ಈ ಡೈಲಾಗ್ ಸಖತ್ ಟ್ರೆಂಡ್ ಆಗಿದೆ. ಇದನ್ನು ಹಾಡಾಗಿ ಬದಲಾಗಿದೆ. ಕಲರ್ಸ್ ಕನ್ನಡ ಈ ವಿಡಿಯೋನ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಉದ್ದೇಶಿಸಿ ‘ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು’ ಎಂದು ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ  ಡೈಲಾಗ್ ಹೇಳಿದ್ದರು. ಇದು ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಟುಡೇಸ್ ಬೀಟ್ಸ್’ ಹೆಸರಿನ ಇನ್​ಸ್ಟಾಖಾತೆ ಹೊಂದಿರೋ ಐನ್​ಸ್ಟನ್ ಫರ್ನಾಂಡಿಸ್ ಅವರು ಈ ಡೈಲಾಗ್​ನ ರಿಮಿಕ್ಸ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.