ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?

Updated on: Dec 25, 2025 | 9:00 AM

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಜೋರಾಗಿಯೇ ನಡೆದಿದೆ. ಗಿಲ್ಲಿ ಕುಟುಂಬದವರು ಆಗಮಿಸಿ ಇಡೀ ಮನೆಯ ಖುಷಿಯನ್ನು ಹೆಚ್ಚಿಸಿದ್ದಾರೆ. ಪ್ರೀತಿಯಿಂದ ಗಿಲ್ಲಿಯನ್ನು ಅಪ್ಪಿದ್ದಾರೆ. ಇದರ ಜೊತೆಗೆ ಕೂದಲು ಬಾಚಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದವು. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಲ್ಲಿ ಇಂದಿನ ಎಪಿಸೋಡ್​​ನಲ್ಲಿ ಗಿಲ್ಲಿ ಕುಟುಂಬದವರು ಆಗಮಿಸಿದ್ದಾರೆ. ಅಪ್ಪ-ಅಮ್ಮ ಇಬ್ಬರೂ ಗಿಲ್ಲಿಯನ್ನು ನೋಡಿ ಖಷಿಪಟ್ಟಿದ್ದಾರೆ. ಕೂದಲಿಗೆ ಬಣ್ಣ ಹಾಕಿ ಬರಬೇಕಿತ್ತು ಎಂದು ಗಿಲ್ಲಿ ಅವರು ತಮ್ಮ ತಾಯಿ ಬಳಿ ದೂರಿದರು. ಆಗ ತಾಯಿ, ‘ನೀನೇಕೆ ಕೂದಲನ್ನು ಹೀಗೇ ಬಾಚಿಕೊಳ್ಳದೆ ಇಟ್ಟುಕೊಂಡಿರುವೆ’ ಎಂದು ಪ್ರಶ್ನೆ ಮಾಡಿದರು. ಆ ಬಳಿಕ ಗಿಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಕೂಡ ಮಾಡಿಸಲಾಯಿತು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More