ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

Updated on: Feb 02, 2026 | 6:21 PM

ಶಿವರಾಜ್​​ಕುಮಾರ್, ಗಿಲ್ಲಿ ನಟ, ರಚಿತಾ ರಾಮ್, ಮಂಗ್ಲಿ ಮುಂತಾದ ಸೆಲೆಬ್ರಿಟಿಗಳು ಕನಕೋತ್ಸವದಲ್ಲಿ ಭಾಗಿಯಾಗಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಕನಕೋತ್ಸವದ ರಂಗೇರಿತು. ವೇದಿಕೆಯಲ್ಲಿ ಮಸ್ತ್ ಡ್ಯಾನ್ಸ್, ಹಾಡುಗಳು ಕನಕಪುರದ ಜನರಿಗೆ ಮನರಂಜನೆಯ ರಸದೌತಣ ಬಡಿಸಿದೆ. ಝಗಮಗಿಸುವ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ..

ಅದ್ದೂರಿಯಾಗಿ ‘ಕನಕೋತ್ಸವ’ (Kanakotsava) ನಡೆಯಿತು. ಕನಕಪುರದಲ್ಲಿ ನಡೆದ ಈ ಉತ್ಸವದ ವೇದಿಕೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ, ಗಾಯಕಿ ಮಂಗ್ಲಿ, ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕಾಣಿಸಿಕೊಂಡರು. ಅನುಶ್ರೀ ಅವರ ಕಾಲಿಗೆ ಬಿದ್ದ ಗಿಲ್ಲಿ, ‘ಇವರೇ ನನ್ನ ಗಾಡ್ ಮದರ್’ ಎಂದು ಹೇಳಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಎದುರಲ್ಲಿ ಗಿಲ್ಲಿ ನಟ (Gilli Nata) ಅವರು ಭರ್ಜರಿ ಡೈಲಾಗ್ ಹೇಳಿ ರಂಜಿಸಿದರು. ಅನಾರೋಗ್ಯ ಪೀಡಿತ ಮಗುವಿನ ಜೊತೆ ಅವರು ಆ ವೇದಿಕೆಯಲ್ಲೇ ವಿಡಿಯೋ ಕಾಲ್ ಮೂಲಕ ಮಾತನಾಡಿದರು. ಆ ಕ್ಷಣ ಬಹಳ ಎಮೋಷನಲ್ ಆಗಿತ್ತು. ವಿಜಯ್ ಪ್ರಕಾಶ್ ಅವರ ಹಾಡುಗಳನ್ನು ಕೇಳಿ ಜನರು ಎಂಜಾಯ್ ಮಾಡಿದರು. ತೆಲುಗು ಬೆಡಗಿ ಮಂಗ್ಲಿ (Singer Mangli) ಅವರು ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..’ ಗೀತೆಯನ್ನು ಹಾಡಿ ವೇದಿಕೆಯ ಮೆರುಗು ಹೆಚ್ಚಿಸಿದರು. ರಚಿತಾ ರಾಮ್, ಶಿವರಾಜ್​ಕುಮಾರ್, ಮೇಘಾ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ಕೂಡ ಕನಕೋತ್ಸವದಲ್ಲಿ ಭಾಗಿಯಾಗಿ ಸಿಕ್ಕಾಪಟ್ಟೆ ಮನರಂಜನೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More