‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ
ಗಿಲ್ಲಿ ಅವರು ಸುದೀಪ್ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ನಮಸ್ಕರಿಸಿದ್ದಾರೆ ಗಿಲ್ಲಿ. ಇದಕ್ಕೆ ಕಾರಣವೂ ಇದೆ. ಪ್ರತಿ ಹಂತದಲ್ಲಿ ಸುದೀಪ್ ಅವರು ಗಿಲ್ಲಿಯನ್ನು ತಿದ್ದಿದ್ದಾರೆ. ಈ ಕಾರಣಕ್ಕೆ ಗಿಲ್ಲಿಗೆ ಖುಷಿಯಾಗಿದೆ. ಹೀಗಾಗಿ, ವಿಟಿ ನೋಡಿದ ಬಳಿಕ ಅವರು ಧನ್ಯವಾದ ಹೇಳಿದರು. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.
ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ, ‘ಇದು ಶೋ ಅಲ್ಲ, ಜೀವನ ಅಂತ ಗೊತ್ತಾಯ್ತು. ತಪ್ಪನ್ನು ತಿದ್ದಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದೀರಿ. ಸಾಯೋವರೆಗೆ ನಿಮ್ಮ ಮರೆಯಲ್ಲ’ ಎಂದರು ಗಿಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.