ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್ ಎನರ್ಜಿ: ಸುದೀಪ್ ಎದುರು ದೂರು ಹೇಳಿದ ಗಿಲ್ಲಿ
ಬಿಗ್ ಬಾಸ್ ಮನೆಯ ಒಂದು ರೂಮ್ನಲ್ಲಿ ನೆಗೆಟಿವ್ ಎನರ್ಜಿ ಇದೆ ಎಂಬ ವಿಚಾರ ತುಂಬಾ ಚರ್ಚೆ ಆಗಿತ್ತು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದರು. ಅದೇ ವಿಚಾರ ಇಟ್ಟುಕೊಂಡು ಭಾನುವಾರದ (ನ.23) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯೊಳಗಿನ ಒಂದು ರೂಮ್ನಲ್ಲಿ ನೆಗೆಟಿವ್ ಎನರ್ಜಿ ಇದೆ ಎಂಬ ವಿಷಯ ಸಾಕಷ್ಟು ಚರ್ಚೆ ಆಗಿತ್ತು. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಭಾನುವಾರದ (ನವೆಂಬರ್ 23) ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಆಗ ಗಿಲ್ಲಿ ನಟ (Gilli Nata) ಪ್ರತಿಕ್ರಿಯೆ ನೀಡಿದರು. ‘ಆ ರೂಮ್ನಲ್ಲಿ ನಾವೂ ಮಲಗಿದ್ದೆವು. ಅಲ್ಲಿ ಯಾರು ಕ್ಲೋಸ್ ಆಗುತ್ತಾರೋ ಅವರೆಲ್ಲ ಮನೆಗೆ ಹೋಗುತ್ತಾರೆ. ಅಶ್ವಿನಿ ಮೇಡಂ ಸ್ವತಃ ಎಲಿಮಿನೇಟ್ ಆಗಿ ಹೊರಗೆ ಹೋಗಲು ನಿಂತಿದ್ದರು. ದೃಷ್ಟಿ ತೆಗೆದಿರುವುದು ಎಷ್ಟು ಎಫೆಕ್ಟ್ ಆಗಿದೆ ನೋಡಿ’ ಎಂದು ಗಿಲ್ಲಿ ನಟ ಹೇಳಿದ್ದಾರೆ. ಅಂದಹಾಗೆ, ಈ ಸಂಚಿಕೆಯಲ್ಲಿ ಮತ್ತೆ ಸುದೀಪ್ (Kichcha Sudeep) ಅವರು ಸ್ಪರ್ಧಿಗಳಿಂದ ದೃಷ್ಟಿ ತೆಗೆಸಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

