ರಕ್ಷಿತಾನ ಹೇಗೆ ಲಾಕ್ ಮಾಡಿದ್ರು ನೋಡಿ ಗಿಲ್ಲಿ; ಮಾತೇ ಇಲ್ಲ
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ರಕ್ಷಿತಾ ಶೆಟ್ಟಿ ಕೂಡ ಅವರಿಗೆ ಸ್ಪರ್ಧಿಯಾಗಿದ್ದಾರೆ. ರಕ್ಷಿತಾನ ಅವರು ಮಾತಿನಲ್ಲಿ ಸಿಕ್ಕಿಸಿದ್ದಾರೆ. ಅವರಿಗೆ ನಂತರ ಮಾತು ಬಂದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಆ ಬಗ್ಗೆ ಇಲ್ಲಿದೆ ವಿವರ.
ರಕ್ಷಿತಾ ಶೆಟ್ಟಿ ಅವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಗಿಲ್ಲಿ ಕೇಳಿದರು. ಕಾವ್ಯಾ ಇಷ್ಟ ಎಂದು ರಕ್ಷಿತಾ ಹೇಳುತ್ತಾರೆ ಮತ್ತು ನಾಮಿನೇಟ್ ಮಾಡುತ್ತಾರೆ. ಈ ದ್ವಂದ್ವ ನೀತಿಯನ್ನು ಗಿಲ್ಲಿ ಪ್ರಶ್ನೆ ಮಾಡಿದರು. ಸ್ಪಂದನಾ ಎಲಿಮಿನೇಟ್ ಆದಾಗ ರಕ್ಷಿತಾ ಏಕೆ ಅತ್ತಿಲ್ಲ ಎಂಬುದನ್ನು ಕೇಳಲಾಯಿತು. ಇದಕ್ಕೆ ರಕ್ಷಿತಾ ಬಳಿ ಉತ್ತರ ಇರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
