ಗಿಲ್ಲಿ ನಟನ ಬಿಗ್ ಬಾಸ್ ವಿನ್ನಿಂಗ್ ಮೂಮೆಂಟ್ ಹೇಗಿತ್ತು ನೋಡಿ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವಿನ್ನರ್ ಹೆಸರನ್ನು ಜನವರಿ 18ರಂದು ಘೋಷಣೆ ಮಾಡಿದರು. ಅದು ಗಿಲ್ಲಿ ನಟನ ಹೆಸರಾಗಿತ್ತು. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಂತೂ ಸತ್ಯ. ಮೊದಲು ಗಿಲ್ಲಿಯನ್ನು ಭಯ ಬೀಳಿಸಿದರು. ಆ ಬಳಿಕ ಗಿಲ್ಲಿ ವಿನ್ನರ್ ಎಂದು ಘೋಷಣೆ ಮಾಡಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಹೆಸರನ್ನು ಸುದೀಪ್ ಅವರು ಜನವರಿ 18ರಂದು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು ಮತ್ತು ಆ ಹೆಸರು ಗಿಲ್ಲಿ ಅವರದ್ದಾಗಿತ್ತು. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ ಎಂದೇ ಹೇಳಬಹುದು. ಗಿಲ್ಲಿಯ ವಿನ್ನಿಂಗ್ ಮೂಮೆಂಟ್ ತುಂಬಾನೇ ಸುಂದರಮಯವಾಗಿತ್ತು. ಕಿಚ್ಚ ಸುದೀಪ್ ವಿನ್ನರ್ ಘೋಷಣೆ ಮಾಡುತ್ತಿದ್ದಂತೆ ಗಿಲ್ಲಿ ಹಾಗೂ ಅವರ ಅಭಿಮಾನಿಗಳು ಖುಷಿಯಾದರು. ಗಿಲ್ಲಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 19, 2026 07:51 AM