Loading video

ಆನೇಕಲ್​​: ತೇರು ಬಿದ್ದು ಮಗಳು ಸಾವು, ಘಟನೆ ಬಗ್ಗೆ ತಾಯಿ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 23, 2025 | 6:41 PM

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಬಿದ್ದು ಆರನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಸಾವನ್ನಪ್ಪಿದ್ದಾಳೆ. ನನ್ನ ಮಗಳ ಮೇಲೆ ತೇರು ಬಿದ್ದು ಮೃತಪಟ್ಟಿದ್ದಾಳೆ. ಇಲ್ಲಿಯವರೆಗೂ ಯಾರು ಬಂದು ನಮ್ಮ ಸಮಸ್ಯೆ ಕೇಳಿಲ್ಲ. ತಾಲ್ಲೂಕು ಆಡಳಿತದವರು ಯಾರು ಕೂಡ ಬಂದಿಲ್ಲ. ನಮ್ಮ ಕಷ್ಟ ಕೇಳುವವರು ಯಾರು ಇಲ್ಲ ಎಂದು ಮೃತಳ ತಾಯಿ ಹೇಳಿದ್ದಾರೆ.

ಆನೇಕಲ್​, ಮಾರ್ಚ್​ 23: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಬಿದ್ದು ಆರನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮೃತ ಜ್ಯೋತಿ ತಾಯಿ ಗಂಗಮ್ಮ ಮಾತನಾಡಿದ್ದು, ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಗೊಂಬೆಗಳನ್ನ ತುಂಬಿಕೊಂಡು ನಾನು ಬೇರೆಡೆ ಇಟ್ಟು ಬರಲು ಹೋಗಿದ್ದೆ. ನನ್ನ ಮಗಳು, ಆಕೆಯ ಸ್ನೇಹಿತೆ ಪಾನಿಪುರಿ ಅಂಗಡಿ ಹತ್ತಿರ ನಿಂತಿದ್ದರು. ನಾನು ಬರುವುದರ ಒಳಗೆ ತೇರು ನನ್ನ ಮಗಳ ಮೇಲೆ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ನನ್ನ ಮಗಳು ಬದುಕಲಿಲ್ಲ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.